ಲಕ್ಷುರಿ ಸವಾರಿ: 90 ಮತ್ತು 80 ಲಕ್ಷ ರೂ.ನ ಬೆಂಝ್ ಕಾರ್

Mercedes Benz India
ನವದೆಹಲಿ, ಮೇ 4: ಪ್ರತಿದಿನ ದೇಶದ ರಸ್ತೆಗೆ ಹೊಸ ಹೊಸ ಐಷಾರಾಮಿ ಕಾರುಗಳು ಪ್ರವೇಶಿಸುತ್ತಿವೆ. ಈಗ ಜರ್ಮನಿಯ ಲಕ್ಷುರಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝ್ ಎಸ್ಎಲ್ 350 ಮತ್ತು ಜಿಎಲ್ 500 ಎಂಬ ಎರಡು ಪ್ರೀಮಿಯಂ ಕಾರುಗಳನ್ನು ಹೊರತಂದಿದೆ. ಇವೆರಡರ ದೆಹಲಿ ಎಕ್ಸ್ ಶೋರೂಂ ದರ ಕ್ರಮವಾಗಿ 98.5 ಲಕ್ಷ ರೂಪಾಯಿ ಮತ್ತು 80.9 ಲಕ್ಷ ರೂಪಾಯಿ ಆಗಿದೆ.

ಇದರಲ್ಲಿ "ಎಸ್ಎಲ್ 350" ಸ್ಪೋರ್ಟ್ಸ್ ಕಾರು 3.5 ಲೀಟರ್ ನ ವಿ6 ಎಂಜಿನ್ ಹೊಂದಿದೆ. ಮತ್ತೊಂದು ಎಸ್ ಯುವಿ "ಜಿಎಲ್ 500" ಆವೃತ್ತಿಯು 5.4 ಲೀಟರ್ ನ ವಿ6 ಎಂಜಿನ್ ಹೊಂದಿದೆ. ಇದರಲ್ಲಿ ಜಿಎಲ್ 500 ಎಂಬುದು ವಿಶ್ವದಲ್ಲಿಯೇ ಅತ್ಯಧಿಕ ಶಕ್ತಿಶಾಲಿ ಎಸ್ ಯುವಿ ಕಾರಾಗಿದೆ. ಜಾಗತಿಕವಾಗಿ 300ಎಸ್ಎಲ್ ಗುಲ್ ವಿಂಗ್ ಸೇರಿದಂತೆ ಬೆಂಝ್ ಎಸ್ಎಲ್ ಶ್ರೇಣಿಯ ಕಾರುಗಳು ಜನಪ್ರಿಯವಾಗಿವೆ. ನೂತನ ಎಸ್ಎಲ್ 350 ಬೆಂಝ್ ಫ್ಯಾಮಿಲಿಯ ಆಕರ್ಷಕ ಕಾರಾಗಿದೆ.

ಹೊಸ "ಎಸ್ಎಲ್ 350" ಕಾರು 350 ಹಾರ್ಸ್ ಪವರ್ ನೀಡುತ್ತದೆ. ಇಂಧನ ಅತ್ಯಧಿಕ ಇಂಧನ ದಕ್ಷತೆ ಮತ್ತು ಕಾರ್ಯಕ್ಷಮತೆಯ ಸಮ್ಮೀಳನವಾಗಿದೆ. ಈ ಶ್ರೇಣಿಯ ಕಾರುಗಳು ಸ್ಟಾಂಡರ್ಡ್ ಸ್ಪೋರ್ಟ್ಸ್ ಪ್ಯಾಕೇಜ್ ಹೊಂದಿದ್ದು ಅತ್ಯುತ್ತಮ ಸವಾರಿಗೆ ಸೂಕ್ತವಾಗಿದೆ. ನಾಪ್ಪಾ ಲೆದರ್ ಸೀಟ್ ಮತ್ತು ಅಲ್ಯುಮಿನಿಯಂ ವಿನ್ಯಾಸಗಳಿಂದ ಇಂಟಿರಿಯರ್ ಗಮನ ಸೆಳೆಯುತ್ತದೆ.

ಜಿಎಲ್ 500 ಎಂಬುದು ವಿಶ್ವದ ಅತ್ಯಧಿಕ ಶಕ್ತಿಶಾಲಿ ಎಸ್ ಯುವಿ. ಇದರು ಸುಮಾರು 388 ಹಾರ್ಸ್ ಪವರ್ ನೀಡುತ್ತದೆ. ಈ ಕಾರು ಹಗುರವಾಗಿದ್ದು ಇಂಧನ ದಕ್ಷತೆಯನ್ನು ಹೆಚ್ಚಿಸಿದೆ. ಜಿಎಲ್ ಕಾರು 7ಜಿ ಟ್ರೊನಿಕ್ ಎಂಬ 7 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಸಣ್ಣದಾಗಿರುವ ಗೇರುಗಳನ್ನು ಸ್ಮೂತಾಗಿ ಬದಲಾಯಿಸಬಹುದಾಗಿದೆ. ಇದರಲ್ಲಿ ಮ್ಯಾನುಯಲ್ ಆಗಿ ಬದಲಾಯಿಸಬಲ್ಲ ಪೆಡಲ್ ಗೇರ್ ಸಹ ಇದೆ. ಸದ್ಯ ಮರ್ಸಿಡಿಸ್ ಬೆಂಝ್ ಫ್ಯಾಮಿಲಿಯಿಂದ ಬಂದ ಇವೆರಡು ಆಕರ್ಷಕ ಮತ್ತು ಶಕ್ತಿಶಾಲಿ ಕಾರುಗಳೆಂಬುರಲ್ಲಿ ಎರಡು ಮಾತಿಲ್ಲ.

More from DriveSpark

Article Published On: Wednesday, May 4, 2011, 10:17 [IST]
English summary
German luxury car maker Mercedes-Benz unveiling two of its premium luxury models SL 350 and GL 500 in India. Priced at Rs 98.5 lakh and Rs 80.9 lakh. Mercedes benz sl 350 and GL 500 review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+