ವಾಹನಗಳ ಇಂಧನ ದಕ್ಷತೆಗೆ ಸ್ಟಾರ್ ರೇಟಿಂಗ್ ಮಸೂದೆ

ವಾಹನಗಳ ಇಂಧನ ದಕ್ಷತೆ ಕಂಡುಹಿಡಿಯುವ ಮಾನದಂಡ ರಚಿಸುವ ಕುರಿತು ಕಾರ್ಯಪ್ರವೃತ್ತರಾಗಿರುವುದಾಗಿ ದೇಶದ ಎನರ್ಜಿ ಎಫಿಸಿಯನ್ಸಿ ವಿಭಾಗದ ಪ್ರಧಾನ ನಿರ್ದೇಶಕ ಅಜಯ್ ಮಾಥುರ್ ಹೇಳಿದ್ದಾರೆ. ವಾಹನಗಳನ್ನು ಅವುಗಳ ತೂಕಕ್ಕೆ ಅನುಗುಣವಾಗಿ ವಿವಿಧ ಇಂಧನ ದಕ್ಷತೆಯ ರೇಟಿಂಗ್ ನೀಡಲಾಗುವುದು ಎಂದರು.
ಎಲ್ಲಾ ವಾಹನಗಳಲ್ಲಿ ಇರಬೇಕಾದ ಸರಾಸರಿ ಇಂಧನ ದಕ್ಷತೆಯನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ಆರಂಭದ ಹಂತದಲ್ಲಿ ಇದನ್ನು ಪ್ರಯಾಣಿಕ ಕಾರುಗಳಿಗೆ ಅಳವಡಿಸಲಾಗುವುದು. ನಂತರ ಸ್ಕೂಟರ್, ಬೈಕ್, ಬಸ್ ಮತ್ತು ಟ್ರಕ್ ಗಳಿಗೆ ಹಂತಹಂತವಾಗಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications








