ರಸ್ತೆಗಿಳಿಯಲು ಸರತಿ ಸಾಲಿನಲ್ಲಿವೆ 14 ಜಿಎಮ್ ಕಾರುಗಳು

ಮುಂದಿನ ಏಪ್ರಿಲ್ ತಿಂಗಳಲ್ಲಿ ಕಂಪನಿಯು ಸಣ್ಣ ಷೆವರ್ಲೆ ಎಲೆಕ್ಟ್ರಿಕ್ ಕಾರೊಂದನ್ನು ಪ್ರದರ್ಶಿಸಲಿದೆ ಎಂದರು. ಇದನ್ನು ಜನರಲ್ ಮೋಟರ್ಸ್ ನ ಬೆಂಗಳೂರು ಘಟಕದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆದರೂ ಎಲೆಕ್ಟ್ರಿಕ್ ಕಾರನ್ನು ರಸ್ತೆಗೆ ಯಾವಾಗ ಬಿಡ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.
2012 ಮತ್ತು 2013ರ ವರ್ಷಗಳಲ್ಲಿ ಜನರಲ್ ಮೋಟರ್ಸ್ ಎರಡರಿಂದ ಮೂರು ಲಕ್ಷ ಕಾರುಗಳನ್ನು ಮಾರಾಟ ಮಾಡಲು ಯೋಜಿಸಿದೆ. ಕಳೆದ ವರ್ಷದ ದೇಶದ ಕಾರು ಮಾರುಕಟ್ಟೆ ಒಟ್ಟಾರೆ ಶೇಕಡಾ 30ರಷ್ಟು ಪ್ರಗತಿ ಕಂಡಿದೆ. ಇದರಲ್ಲಿ ಜನರಲ್ ಮೋಟರ್ಸ್ ಮಾರಾಟವು ಶೇಕಡಾ 60ರಷ್ಟು ಏರಿಕೆ ಕಂಡಿದೆ ಎಂದರು.


Click it and Unblock the Notifications








