ರಾತ್ರಿ ಸವಾರಿ: ಹೊಸ ಪ್ರೀತಿಗೆ ಬಿದ್ದ ಶಾಹಿದ್ ಕಪೂರ್

Shahid Kapoor
ಇದು ಬಾಲಿವುಡ್ ನಟ ಶಾಹೀದ್ ಕಪೂರ್ ಹೊಸ ಲವ್ ಸ್ಟೋರಿ. ಹೌದು ಆತ ಮತ್ತೆ ಪ್ರೀತಿಗೆ ಬಿದ್ದಿದ್ದಾನೆ. ತನ್ನ ಪ್ರೀತಿಯೊಂದಿಗೆ ದಿನವಿಡಿ ಸುತ್ತುತ್ತಾನೆ. ಅದರಲ್ಲೂ ರಾತ್ರಿ ಹೊತ್ತು ಸುತ್ತಾಡೋ ಹೊಸ ಕ್ರೇಝ್ ಆತನದು. ಅರೇ ಇದ್ಯಾರು ಅವನ ರಾತ್ರಿಯ ಗೆಳತಿ ಅಂತ ತಲೆಕೆಡಿಸಿಕೊಳ್ಳಬೇಡಿ. ಸದ್ಯ ಆತ ತೆಕ್ಕೆಗೆ ತೆಗೆದುಕೊಂಡದ್ದು ಹೊಸ ಬೈಕ್ ಹಯಾಬುಸವನ್ನು. ತನ್ನ ಫ್ಯಾನ್ಸಿ ಕಾರುಗಳನ್ನು, ಹಳೆಯ ಬೈಕ್ ಗಳನ್ನು ಪಕ್ಕಕ್ಕಿಟ್ಟು ಹಯಾಬುಸ ಸವಾರಿ ಮಾಡುತ್ತಿದ್ದಾನೆ.

ಸೂರ್ಯ ಮುಳುಗಿದ ನಂತರ ಹಯಾಬುಸ ರೈಡ್ ಮಾಡೋ ಕ್ರೇಝ್ ಇವನದು. ಇತ್ತೀಚಿಗೆ ರಣಬೀರ್ ಕಪೂರ್ ಪಾರ್ಟಿಗೆ ಈತ ಬಂದಾಗ ಎಲ್ಲರೂ ಕಣ್ಣು ಈತನ ಹಯಾಬುಸದ ಮೇಲಿದ್ದದ್ದು ಸುಳ್ಳಲ್ಲ. ಅಷ್ಟು ಜೋಷಾಗಿ ಬಂದಿದ್ದನಂತೆ. ಪ್ರಿಯಾಂಕ ಛೋಪ್ರಾ ತನ್ನ ಪ್ರೀತಿಯ ಹಯಾಬುಸದಲ್ಲಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಶಾಹಿದ್ ಕಪೂರ್. ಬೈಕ್ ಬ್ಯೂಟಿ ಹಯಾಬುಸವೆಂದರೆ ಬರೀ ಶಾಹಿದ್ ಗೆ ಮಾತ್ರ ಇಷ್ಟವಲ್ಲ. ಜಾನ್ ಅಬ್ರಾಹಂನಿಂದ ಹಿಡಿದು, ಅರ್ಜುನ್ ರಾಂಪಾಲ್, ಅಜಯ್ ದೇವ್ ಗನ್, ಸಂಜಯ್ ದತ್ ಎಲ್ಲರಿಗೂ ಈ ಬ್ಯೂಟಿ ಇಷ್ಟವಂತೆ!

ಹೊಸ ಹಯಾಬುಸ ಶಾಹೀದ್ ವಾಹನ ಲೋಕಕ್ಕೆ ನ್ಯೂ ಎಂಟ್ರಿ. ಈತನಲ್ಲಿ ಸಾಕಷ್ಟು ಬೈಕ್ ಮತ್ತು ಕಾರುಗಳಿವೆ. ಹೆಚ್ಚಿನವು ಜಾಲಿ ರೈಡ್ ಗೆ ಸೂಕ್ತವಾದದ್ದು. ಆತ ಪದವಿಯಲ್ಲಿದ್ದಾಗ ಮಾರುತಿ 800 ಕಾರು ಹೊಂದಿದ್ದ. 18ರ ಪ್ರಾಯದಲ್ಲಿ ಬಜಾಜ್ ಕ್ಯಾಲಿಬಾರ್ ಬೈಕ್ ಶಾಹೀದ್ ನಲ್ಲಿತ್ತು. ಈಗ ಆತನಲ್ಲಿರುವುದು ಲಕ್ಷುರಿ ಕಾರುಗಳು. ಈಗ ಶಾಹೀದ್ ಜಾಗ್ವಾರ್ ಲ್ಯಾಂಡ್ ರೋವರ್ ಕಾರ್ ಮಾಲಿಕ ಅಂದ್ರೆ ಆಶ್ಚರ್ಯದ ಸಂಗತಿಯೇನಲ್ಲ ಬಿಡಿ. ಭಾರತದಲ್ಲಿ 2010ರ ಲ್ಯಾಂಡ್ ರೋವರ್ ಮೊದಲ ಗ್ರಾಹಕ ಕೂಡ ಇವನೇ.

ಕೆಲವು ತಿಂಗಳ ಹಿಂದೆ ಆತ ಹರ್ಲಿ ಡೇವಿಡ್ ಸನ್ ಬೈಕ್ ಕೂಡ ಖರೀದಿಸಿದ್ದ. ಶಾಹೀದ್ ಗ್ಯಾರೇಜ್ ನಲ್ಲಿ ಯಮಾಹ ಎಂಟಿ-01 ಮತ್ತು ಹೋಂಡಾ ಸಿಬಿಆರ್ 954 ಎಂಬ ಬೈಕ್ ಗಳೂ ಇವೆ. ಬರೀ ಸಿನಿಮಾಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ವಾಹನ ಸವಾರಿಯೆಂದರೆ ಶಾಹೀದ್ ಗೆ ಸಕತ್ ಇಷ್ಟ. ಅದರಲ್ಲೂ ರಾತ್ರಿ ಸವಾರಿ ನೀಡುವ ಮಜನೇ ಬೇರೆ ಅಂತಾನೆ. ಲಕ್ಷುರಿ ಸ್ಪೋರ್ಟ್ಸ್ ಕಾರು ಫೋರ್ಡ್ ಮಸ್ಟಾಂಗ್ ಖರೀದಿಸುವುದು ಶಾಹೀದ್ ಕಪೂರ್ ಮುಂದಿನ ಕನಸಂತೆ.

More from DriveSpark

Article Published On: Saturday, May 7, 2011, 14:44 [IST]
English summary
Bollywood actor Shahid Kapoor has found a new love. Well, are not talking about the woman in his life but his new love - the Hayabusa. Shahid Kapoor owned Bajaj Caliber at the age of 18. He owned a red Maruti 800 when he was graduating. Now he owned new Range Rover 2010 Model, Harley-Davidson bike, Yamaha MT-01, Hummer, Honda CBR 954 RR and more... Shahid Kapoors bike and car collection amazing. read this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+