ದೀಪಿಕಾ ಪಡುಕೋಣೆ ಅನಾವರಣ ಮಾಡಿದ ಆಡಿ ಬ್ಯೂಟಿ

ಬಹುನಿರೀಕ್ಷಿತ ನೂತನ ಆಡಿ7 ಕಾರು ದೇಶದ ರಸ್ತೆಗಿಳಿದಿದೆ. ಆಡಿ ಇಂಡಿಯಾದ ನೂತನ ಕಾರನ್ನು ಬಿಡುಗಡೆ ಮಾಡಿದ ದೀಪಿಕಾ ಪಡುಕೋಣೆ ಈ ಸ್ಪೋರ್ಟಿ ಬ್ಯೂಟಿಗೆ ಮನಸೋತರು. ಇದರೊಂದಿಗೆ ಕಂಪನಿಯು ಆರ್ಎಸ್5 ಎಂಬ ಲಕ್ಷುರಿ ಕಾರನ್ನು ಹೊರತಂದಿದೆ. ದೇಶದ ಶ್ರೀಮಂತರ ಸವಾರಿಗೆ ಸೂಕ್ತವಾಗಿರುವ ಈ ಲಕ್ಷುರಿ ಕಾರುಗಳು ಒಂದಕ್ಕೊಂದು ಪೈಪೋಟಿ ನೀಡುವಂತೆ ಆಕರ್ಷಕವಾಗಿದೆ.

ಆಡಿ ಎ7 ಎಂಬುದು 5 ಡೋರಿನ ಸ್ಪೋರ್ಟ್ಸ್ ಕೂಪ್ ಆಗಿದ್ದು ಐಷಾರಾಮಿ ಮತ್ತು ಸ್ಪೋರ್ಟಿ ರೈಡ್ ಗೆ ಸೂಕ್ತವಾಗಿದೆ. ಇದರು 3.0 ಲೀಟರ್ ನ ಟಿಡಿಐ ಎಂಜಿನ್ ಹೊಂದಿದ್ದು ಸುಮಾರು 245 ಹಾರ್ಸ್ ಪವರ್ ನೀಡುತ್ತದೆ. ಎಸ್-ಟ್ರೊನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ನೂತನ ಕಾರನ್ನು ಲಕ್ಷುರಿ ಡ್ರೈವ್ ಗೆ ಪೂರಕವಾಗಿ ರೂಪಿಸಲಾಗಿದೆ. ಇದರ ಆರಂಭಿಕ ದರ 64 ಲಕ್ಷ ರೂ. ಆಗಿದೆ. ಮುಂದಿನ 30 ದಿನಗಳೊಳಗೆ ಈ ಕಾರು ದೇಶದ ಎಲ್ಲಾ ಶೋರೂಂಗಳಲ್ಲಿ ಲಭ್ಯವಿರುವ ನಿರೀಕ್ಷೆಯಿದೆ.

ಆರ್ಎಸ್5 ಎಂಬುದು ಎರಡು ಡೋರಿನ ಸ್ಪೋರ್ಟ್ಸ್ ಕೂಪಾಗಿದೆ. ಇದು 4.2 ಲೀಟರ್ ಪೆಟ್ರೊಲ್ ಎಂಜಿನ್ ಹೊಂದಿದ್ದು ಸುಮಾರು 450 ಹಾರ್ಸ್ ಪವರ್ ನೀಡುತ್ತದೆ. ಇದರ ಗರಿಷ್ಠ ವೇಗ ಪ್ರತಿಗಂಟೆಗೆ ಸುಮಾರು 280 ಕಿ.ಮೀ. ಆಗಿದೆ. ಆರ್ಎಸ್5 ಎಂಬುದು ಬಿಎಂಡಬ್ಲ್ಯು ಎಂ3 ಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಇದರ ದರ ಸುಮಾರು 76 ಲಕ್ಷ ರೂಪಾಯಿ.

More from DriveSpark

Article Published On: Thursday, May 12, 2011, 14:39 [IST]
English summary
Audi India has launched two new models in India, the Audi A7 Sportback and the RS5 coupe. Bollywood actor Deepika Padukone launched the A7 Sportback . The Audi A7 Sportback will be available with a price tag starting from Rs 65 lakh while theAudi RS5 coupe will cost Rs76 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+