ಸ್ಕೋಡಾ ಇಂಡಿಯಾದಿಂದ ಅಗ್ಗದ ಸ್ಪೋರ್ಟ್ಸ್ ಕಾರು ನೋಡಾ!

Skoda SUV
ಸ್ಪೋರ್ಟ್ಸ್ ಕಾರುಗಳೆಂದರೆ ದುಬಾರಿ ಅನ್ನೋ ಕಾಲ ಬದಲಾಗುವ ಸೂಚನೆಗಳಿವೆ. ಸ್ಕೋಡಾ ಆಟೋ ಭಾರತದ ರಸ್ತೆಗೆ ಹತ್ತುಲಕ್ಷ ರು.ಗಿಂತ ಕಡಿಮೆ ದರದ ಸಣ್ಣ ಎಸ್ ಯುವಿಗಳನ್ನು ಪರಿಚಯಿಸಲು ಯೋಜಿಸಿದೆ. ಸದ್ಯ ದೇಶದ ವಾಹನ ಮಾರುಕಟ್ಟೆಯಲ್ಲಿ 15 ಲಕ್ಷ ರು.ಗಿಂತ ಕಡಿಮೆಗೆ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ದೊರಕುತ್ತಿಲ್ಲ. ಹೀಗಾಗಿ ಇದು ಭಾರತದ ಮೊದಲ ಅಗ್ಗದ ಸ್ಪೋರ್ಟಿ ಕಾರಾಗಲಿದೆ.

ದೇಶದಲ್ಲಿ ಜಾಗತಿಕ ಕಂಪನಿಗಳ ಕಾರುಬಾರು ಜೋರಾಗಿಯೇ ಇದೆ. ಇದರಲ್ಲಿ ಮಿಟ್ಸುಬಿಸಿ, ಟೊಯೊಟಾ, ಜನರಲ್ ಮೋಟರ್ಸ್, ಹ್ಯುಂಡೈ ಮತ್ತು ಸ್ಕೋಡಾ ಮುಂಚೂಣಿಯಲ್ಲಿವೆ. ಇವೆಲ್ಲ ಕಂಪನಿಗಳು ಈಗಾಗಲೇ ಹಲವು ಎಸ್ ಯುವಿ ಕಾರುಗಳನ್ನು ಪರಿಚಯಿಸಿವೆ. ಆದರೆ ಆ ಕಾರುಗಳು ಹದಿನೈದು ಲಕ್ಷ ರು.ಗಿಂತ ಕಡಿಮೆ ದರಕ್ಕೆ ದೊರಕುವುದಿಲ್ಲ. ಸ್ಕೂಡಾದ ನೂತನ ಎಸ್ ಯುವಿ ಈ ಕಾರುಗಳಿಗೆ ಒಂದಿಷ್ಟು ಬಿಸಿ ಮುಟ್ಟಿಸೋ ನಿರೀಕ್ಷೆಯಿದೆ.

ಬರೀ ಜಾಗತಿಕ ಕಂಪನಿಗಳಿಗೆ ಮಾತ್ರ ನೂತನ ಸ್ಕೋಡಾ ಸ್ಪೋರ್ಟ್ಸ್ ಕಾರು ಹೊಡೆತ ನೀಡಲಿದೆ ಎಂದುಕೊಂಡರೆ ತಪ್ಪಾದೀತು. 10 ಲಕ್ಷ ರು.ಗಿಂತ ಅಗ್ಗದ ಕಾರುಗಳೆಲ್ಲ ಒಂದಿಷ್ಟು ಭಯಪಡಲೇಬೇಕು. ಉದಾಹರಣೆಗೆ ಮಹೀಂದ್ರ ಸ್ಕಾರ್ಪಿಯೊ ದರ ಸುಮಾರು 7.43 ಲಕ್ಷ ರು.ನಿಂದ 12.39 ಲಕ್ಷ ರು.ವರೆಗಿದೆ. ಟಾಟಾ ಸಫಾರಿ 8 ಲಕ್ಷ ರು.ನಿಂದ 13 ಲಕ್ಷ ರು.ಗೆ ದೊರಕುತ್ತಿದೆ. ಈ ಕಾರುಗಳನ್ನು ಖರೀದಿಸಲು ಆಲೋಚಿಸುತ್ತಿದ್ದವರು ಸ್ಕೋಡಾದ ನೂತನ ಸ್ಪೋರ್ಟಿ ಬ್ಯೂಟಿಗೆ ಮರುಳಾಗುವ ಸಾಧ್ಯತೆಯೂ ಇದೆ.

ದೇಶದ ರಸ್ತೆಯಲ್ಲಿರುವ ಮಧ್ಯಮ ಸೆಗ್ಮೆಂಟ್ ನ ಐಷಾರಾಮಿ ಕಾರುಗಳಿಗೂ ಸ್ಕೋಡಾ ಅಗ್ಗದ ಕಾರು ಪೈಪೋಟಿ ನೀಡಲಿದೆ. ಫೋಕ್ಸ್ ವ್ಯಾಗನ್ ವೆಂಟೊ, ಹ್ಯುಂಡೈ ಮತ್ತು ವೆರ್ನಾ ಕಾರುಗಳಿಗೆ ನೂತನ ಸ್ಕೋಡ ಹೊಸ ಸವಾಲು ಎಂದು ವಾಹನ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

"ಈಗ ಎಸ್ ಯುವಿ ಸೆಗ್ಮೆಂಟ್ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಸ್ಪೋರ್ಟ್ಸ್ ಕಾರು ದರಗಳನ್ನು 10 ಲಕ್ಷ ರು.ಗಿಂತ ತಗ್ಗಿಸಲು ಯೋಜಿಸಿದ್ದೇವೆ" ಎಂದು ಸ್ಕೋಡ ಆಟೋ ಇಂಡಿಯಾದ ಆಡಳಿತ ಮಂಡಳಿ ಸದಸ್ಯ ಥೋಮಸ್ ಕ್ಯೂಯೆಲ್ ಹೇಳಿದ್ದಾರೆ. ಆದರೆ ನೂತನ ಕಾರು ಯಾವಾಗ ರಸ್ತೆಗಿಳಿಯಲಿದೆ ಎಂದು ಅವರು ಸ್ಪಷ್ಟಪಡಿಸಿಲ್ಲ.

ಇಷ್ಟೇ ಅಲ್ಲ. ಈ ವರ್ಷದ ಅಂತ್ಯದೊಳಗೆ ಸೆಡಾನ್ ಕಾರೊಂದನ್ನು ಸ್ಕೋಡಾ ಹೊರತಲಿದೆ. ಇದರ ದರ ಸುಮಾರು 6 ಲಕ್ಷ ರು.ನಿಂದ 10 ಲಕ್ಷ ರು.ವರೆಗಿರುವ ನಿರೀಕ್ಷೆಯಿದೆ. ಇದು ಮಾರುತಿ ಸ್ವಿಫ್ಟ್ ಡಿಜೈರ್, ಮಹೀಂದ್ರ ಲೊಗಾನ್ ಮತ್ತು ಇಂಡಿಕಾ ಮಾಂಝಾ ಕಾರುಗಳೊಂದಿಗೆ ಪೈಪೋಟಿಗೆ ಬೀಳಲಿದೆ. ಫಾಬಿಯಾಕ್ಕಿಂತ ಕಡಿಮೆ ದರದ ಇನ್ನೊಂದು ಕಾರನ್ನು ಸ್ಕೋಡಾ ಅಭಿವೃದ್ಧಿಪಡಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

More from DriveSpark

Article Published On: Wednesday, May 18, 2011, 11:45 [IST]
English summary
Skoda Auto, the Czech subsidiary of Volkswagen is reportedly planning to build a mini SUV that is priced below Rs. 10 lakh. This is the first time an international carmaker is attempting to launch an SUV in this price range.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+