ಇನ್ನೋವಾಕ್ಕೆ ಪೈಪೋಟಿ ನೀಡಲು ನಿಸ್ಸಾನ್ ಎನ್ವಿ200

ಇದರಲ್ಲಿ ಎನ್ವಿ200 ಎಂಬ ಕಾರನ್ನು ಅಶೋಕ್ ಲೇಲ್ಯಾಂಡ್ ಜಂಟಿ ಉದ್ಯಮದ ಮೂಲಕ ಹೊರತರಲಿದೆ. ಇದು ಟೊಯೊಟಾ ಇನ್ನೋವಕ್ಕೆ ಹೆಚ್ಚಿನ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಎನ್ವಿ ಆವೃತ್ತಿಯ ವಿಶೇಷತೆಯೆಂದರೆ 1500 ಸಿಸಿ ಡೀಸಲ್ ಎಂಜಿನ್. ಇದು ಸುಮಾರು 106 ಹಾರ್ಸ್ ಪವರ್ ನೀಡಲಿದೆ. ಟೊಯೊಟಾ ಇನ್ನೋವಾ ಮತ್ತು ಟಾಟಾ ಸಫಾರಿಯಂತೆ ಇದರಲ್ಲಿ ಸಾಕಷ್ಟು ಲಗೇಜ್ ಸ್ಥಳಾವಕಾಶವಿದೆ. ಎನ್ವಿ200 ಕಾರು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ. ಇದರಲ್ಲಿ 7 ಜನರು ಆರಾಮವಾಗಿ ಕುಳಿತುಕೊಳ್ಳಬಹುದು.
ಐಷಾರಾಮಿ ಅನುಭವ ನೀಡುವ ಇಂಟಿರಿಯರ್ ವಿನ್ಯಾಸ ಇದರಲ್ಲಿದೆ. ಇಬಿಡಿ, ಬ್ರೇಕ್ ಅಸಿಸ್ಟ್ ಮತ್ತು ಎಬಿಎಸ್ ಮುಂತಾದ ಫೀಚರ್ ಗಳಿವೆ. ಈ ಕಾರಿನ ನಿಖರ ದರವಿನ್ನೂ ಖಚಿತವಾಗಿಲ್ಲ. ಇದರ ದರ ಸುಮಾರು 7 ಲಕ್ಷ ರು.ನಷ್ಟಿರಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications








