ಭಾರತಕ್ಕೆ ಬರಲಿದೆ ನೂತನ ಸ್ಕೋಡಾ ಕಾರು

ಭಾರತಕ್ಕೆ ಬರಲಿದೆ ನೂತನ ಸ್ಕೋಡಾ ಕಾರು
ಸ್ವೀಡನಿನ ಕಾರು ತಯಾರಿಕಾ ಕಂಪನಿ ಭಾರತದ ರಸ್ತೆಗೆ ಹೊಸ ವಿನ್ಯಾಸದ ಸ್ಕೋಡಾ ಕಾರುಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ನೂತನ ಸ್ಕೋಡಾ ಎಂಟ್ರಿ ಲೆವೆಲ್ ಸೆಡಾನ್ ಕಾರಾಗಿದ್ದು ಹೋಂಡಾ ಸಿಟಿ, ಫೋರ್ಡ್ ಫಿಯೆಸ್ಟಾ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪೈಪೋಟಿ ನೀಡಲಿದೆ.

"ಸ್ಕೋಡಾ ಸೆಡಾನ್ ಕಾರನ್ನು ಫ್ರಾಂಕ್ಪರ್ಟ್ ವಾಹನ ಪ್ರದರ್ಶನದಲ್ಲಿ ಮುಂದಿನ ಸೆಪ್ಟಂಬರ್ ನಲ್ಲಿ ಪ್ರದರ್ಶಿಸಲಾಗುವುದು. ಈ ಕಾರು ಶೀಘ್ರದಲ್ಲಿ ಭಾರತದ ಮಾರುಕಟ್ಟೆಗೆ ಬರಲಿದೆ. ಈ ವರ್ಷದಲ್ಲಿಯೇ ಭಾರತದ ರಸ್ತೆಗಿಳಿಯುವ ನಿರೀಕ್ಷೆಯಿದೆ" ಎಂದು ಸ್ಕೋಡಾ ಆಟೋ ಇಂಡಿಯಾದ ಮಾರಾಟ ವಿಭಾಗದ ಥೋಮಸ್ ಕ್ಯೂಯೆಲ್ ಹೇಳಿದ್ದಾರೆ.

ಫೋಕ್ಸ್ ವ್ಯಾಗನ್ ವೆಂಟೊ ಫ್ಲಾಟ್ ಫಾರ್ಮ್ ಬಳಸಿ ನೂತನ ಸ್ಕೋಡಾ ಕಾರನ್ನು ನಿರ್ಮಿಸಲಿದೆ. ಫೋಕ್ಸ್ ವ್ಯಾಗನ್ ವೆಂಟೊ ಜನಪ್ರಿಯ ಕಾರಾಗಿದ್ದು ಹೋಂಡಾ ಸಿಟಿಯನ್ನು ಮಾರಾಟದಲ್ಲಿ ಹಿಂದಿಕ್ಕಿದೆ. ನೂತನ ಸ್ಕೋಡಾ ಕಾರು ದರಗಳು ಫೋಕ್ಸ್ ವ್ಯಾಗನ್ ವೆಂಟೊ ದರದ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

Article Published On: Tuesday, May 31, 2011, 12:59 [IST]
English summary
An all-new Skoda car is set to be launched by the Swedish carmaker in India this year. The new Skoda car will be an entry level sedan that will compete against the Honda City, Ford Fiesta and the Hyundai Verna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+