ಕಾರ್ ಖರೀದಿಸಿದ್ರೆ ಸ್ಕೂಟರ್ ಫ್ರೀ, ಯಾರಿಗುಂಟು ಯಾರಿಗಿಲ್ಲ

ಶಾಂಘೈ ವಾಹನ ಪ್ರದರ್ಶನದಲ್ಲಿ ಗೀಲಿ ಮೆಕಾರ್ (McCar) ಎಂಬ ಸಣ್ಣ ಕಾರನ್ನು ಪ್ರದರ್ಶಿಸಲಾಗಿದೆ. ಮೆಕಾರ್ ಅಂದ್ರೆ ಮ್ಯಾಜಿಕ್ ಕಾರ್. ಈ ಕಾರಿನ ಹಿಂದುಗಡೆ ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಜೋಡಿಸಿರುವುದು ಇದರ ವಿಶೇಷತೆ. ಕಾರು ಚಲಿಸುವಾಗ ಸ್ಕೂಟರ್ ಚಾರ್ಜ್ ಆಗುತ್ತದೆ. ಕಾರಿಂದ ಇಳಿದು ಸ್ಕೂಟರ್ ಮೂಲಕ ಸಾಗಬಹುದು.
ಈ ಸ್ಕೂಟರ್ಕಾರ್ ಬ್ಯಾಟರಿ ಮತ್ತು ಹೈಬ್ರಿಡ್ ಆವೃತ್ತಿಯಲ್ಲಿದೆ. ಬ್ಯಾಟರಿಯನ್ನು 6 ಗಂಟೆ ಚಾರ್ಜ್ ಮಾಡಿದ್ರೆ 93 ಕಿ.ಮಿ. ಪ್ರಯಾಣಿಸಬಹುದು. ಪೆಟ್ರೊಲ್ ಮತ್ತು ಬ್ಯಾಟರಿ ಆಯ್ಕೆಯಲ್ಲಿ ಸವಾರಿ ಮಾಡುತ್ತಿರಾದರೆ ಎರಡು ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ಸಾಕು.
ಈ ಕಾರಿನ ಹಿಂದುಗಡೆ ಎಲೆಕ್ಟ್ರಿಕ್ ಸ್ಕೂಟರ್ ಜೋಡಿಸಲಾಗಿದೆ. ಕಾರು ಚಲಿಸುವಾಗ ಸ್ಕೂಟರ್ ಚಾರ್ಜ್ ಆಗುತ್ತದೆ. ಇದು ಪ್ರತಿಗಂಟೆಗೆ 18 ಮೈಲು ವೇಗದಲ್ಲಿ ಸಾಗುತ್ತದೆ. ಮೆಕಾರ್ ಎಂಬ ಸ್ಕೂಟರ್ಕಾರ್ ನಿರ್ಮಿಸಿದ್ದು ವೋಲ್ವೊ ಕಂಪನಿ. ಕಂಪನಿಯು ಇದರ ಉತ್ಪಾದನೆಯನ್ನು ಮುಂದಿನ ವರ್ಷ ಆರಂಭಿಸುವುದಾಗಿ ಹೇಳಿದೆ.


Click it and Unblock the Notifications








