ಚಳಿಗಾಲದಲ್ಲಿ ದೇಶದ ರಸ್ತೆಗಿಳಿಯಲಿದೆ ಬಿಎಂಡಬ್ಲ್ಯು ಎಕ್ಸ್3
ದೇಶದ ಕಾರು ಮಾರುಕಟ್ಟೆಗೆ ಮತ್ತೊಬ್ಬ ಕೆಟ್ಟ ಹುಡುಗ ಬರುತ್ತಿದ್ದಾನೆ. ಹೆಸರು ಎಕ್ಸ್3. ಬಿಎಂಡಬ್ಲ್ಯು ಕಂಪನಿಯ ಹೊಸ ಸ್ಪೋರ್ಟಿ ಬ್ಯೂಟಿ ಕಾರು 2011ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ರಸ್ತೆಗಿಳಿಯಲು ಸಜ್ಜಾಗಿದೆ.
"ಈಗಾಗಲೇ ಎಕ್ಸ್3 ಟ್ರಯಲ್ ವರ್ಸನನ್ನು ಚೆನ್ನೈನಲ್ಲಿರುವ ಅಸೆಂಬ್ಲಿ ಘಟಕದಲ್ಲಿ ಜೋಡಿಸಿದ್ದೇವೆ. ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹೊಸ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ರಸ್ತೆಗಿಳಿಸಲಿದ್ದೇವೆ" ಎಂದು ಬಿಎಂಡಬ್ಲ್ಯು ಇಂಡಿಯಾದ ಅಧ್ಯಕ್ಷರು ಹೇಳಿದ್ದಾರೆ.
ದೇಶದ ರಸ್ತೆಗೆ ಎಕ್ಸ್3 ಹೆಚ್ಚು ಸೂಕ್ತವಾಗಿದೆ. ಇದು ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕಲಿದೆ. ಇದರ ದರ ಸುಮಾರು 45 ಲಕ್ಷ ರು. ಆಸುಪಾಸಿನಲ್ಲಿರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


Click it and Unblock the Notifications








