ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬಿಎಂಡಬ್ಲ್ಯು ಶೇಕ್ ಹ್ಯಾಂಡ್

ದೇಶದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಗೆ ಆಕ್ಟೋಬರ್ ನಲ್ಲಿ ಪ್ರವೇಶಿಸಲು ಯೋಚಿಸುತ್ತಿರುವುದಾಗಿ ಬಿಎಂಡಬ್ಲ್ಯು ಇಂಡಿಯಾ ಹೇಳಿದೆ. ಇದರೊಂದಿಗೆ ಕಂಪನಿಯು ತನ್ನ ಡೀಲರ್ ನೆಟ್ ವರ್ಕ್ ಗಳನ್ನೂ ವಿಸ್ತರಿಸಲೂ ಯೋಜಿಸಿರುವುದಾಗಿ ಬಿಎಂಡಬ್ಲ್ಯು ಅಧ್ಯಕ್ಷರಾದ ಆಂಡ್ರೆಸ್ ಸ್ಚಾಫ್ ಹೇಳಿದ್ದಾರೆ.

"ನಗರಗಳಲ್ಲಿ ದುಬಾರಿ ಕಾರುಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಇದಕ್ಕಾಗಿ ಮಹಾನಗರಗಳಲ್ಲಿ ಮಾರಾಟ ಜಾಲ ಹೆಚ್ಚಿಸಲು ಹೆಚ್ಚು ಒತ್ತು ನೀಡುತ್ತೇವೆ. 2012ರ ಅಂತ್ಯಕ್ಕೆ ಕಂಪನಿಯು ಸುಮಾರು 40 ಡೀಲರ್ ಷಿಪ್ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ. ಈಗಾಗಲೇ ಮರ್ಸಿಡಿಸ್ ಬೆಂಝ್ ಭಾರತದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಗೆ ಪ್ರವೇಶಿಸಿಯಾಗಿದೆ.

ಸೆಕೆಂಡ್ ಹ್ಯಾಂಡ್ ವಾಹನ ಖರೀದಿಗೆ ಸಲಹೆಗಳು
* ವಾಹನದ ಇತಿಹಾಸ, ದಾಖಲೆಗಳನ್ನು ಪರಿಶೀಲಿಸಿ.
* ಕೆಲವು ಡೀಲರ್ ಗಳು ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ವಾರೆಂಟಿ ನೀಡುತ್ತಾರೆ. ಇದು ಉತ್ತಮ.
* ಜನಪ್ರಿಯವಲ್ಲದ ಮಾಡೆಲ್ ಖರೀದಿಸಬೇಡಿ
* ಫೈನಾನ್ಸ್ ನವರು ಮುಟ್ಟುಗೋಲು ಹಾಕಿದ ವಾಹನ ಖರೀದಿಸಿದರೆ ಅದರ ಹಿಂದಿನ ಮಾಲೀಕನಿಂದ ನಿಮಗೆ ಏನಾದರೂ ಕಿರಿಕಿರಿ ಇರಬಹುದು.
* ತುಂಬಾ ಹಳೆಯ ಕಾರ್ ಬೇಡ. ಖರೀದಿಸಿ ಹೆಚ್ಚು ಸಮಯ ಆಗದ ವಾಹನ ಖರೀದಿಸಿ
* ಎರಡನೇ ಬಾರಿ ಪೈಂಟಿಂಗ್ ಮಾಡಿದ ವಾಹನದ ಮೇಲೆ ಒಂದಿಷ್ಟು ನಿಗವಿರಲಿ. ಎಲ್ಲಾದರೂ ಅಪಘಾತವಾದ ವಾಹನ ಅದಾಗಿರಬಹುದು.
* ಖರೀದಿಗೆ ಹೋದಾಗ ವಾಹನದ ಬಗ್ಗೆ ತಿಳಿದಿರುವವರು ಜೊತೆಗಿರಲಿ
* ದಾಖಲೆ ಪರಿಶೀಲಿಸಿ. ಆರ್ ಟಿ ಒ, ತೆರಿಗೆ, ರಿಜಿಸ್ಟ್ರೇಷನ್, ವಿಮೆ, ಫೈನಾನ್ಸ್ ಸಂಬಂಧಿಸಿದ ದಾಖಲೆಗಳು ಸಮರ್ಪಕವಾಗಿದೆಯೇ ಗಮನಿಸಿ.
* ಎಂಜಿನ್ ಗಾತ್ರ ನೋಡಿ. ಉದಾಹರಣೆಗೆ ಹೋಂಡಾ 1.3 ಎಂಜಿನ್ ಬದಲಾಗಿ ಹೋಂಡಾ 1.5 ಎಂಜಿನ್ ಅಳವಡಿಸಿರಬಾರದಲ್ವ.
* ಟೆಸ್ಟ್ ಡ್ರೈವ್ ಮಾಡಿ. ಮೆಕಾನಿಕ್ ಸಮಸೈಗಳಿವೆಯೇ ಎಂದು ಪರಿಶೀಲಿಸಿ.
* ಅವಸರ ಬೇಡ, ಸುಳ್ಳು ಓನರ್ ಗಳನ್ನು ಡೀಲರ್ ಗಳು ಸೃಷ್ಟಿಸಿರಬಹುದು.
* ವಿಮಾ ಪಾಲಿಸಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಿ. ಹಳೆಯದನ್ನೇ ಮುಂದುವರೆಸಬೇಡಿ.

More from DriveSpark

Article Published On: Friday, June 17, 2011, 11:28 [IST]
English summary
BMW India, the auto major said that it was planning to enter the used car business in October and expanding its dealer network in the country as well. Also here are some tips from second hand vehicle market expert.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+