ಸೆಕೆಂಡ್ ಹ್ಯಾಂಡ್ ನಲ್ಲೂ ಡೀಸೆಲ್ ಕಾರ್ ಕಮಾಲ್

Used car Markets
ಡೀಸೆಲ್ ಕಾರು ಹವಾ ಜೋರಾಗಿದೆ. ಇದೀಗ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲೂ ಡೀಸೆಲ್ ಕಾರುಗಳು ಪ್ರಾಬಲ್ಯ ಪಡೆಯುತ್ತಿವೆ. ಈ ಕಾರುಗಳ ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗುತ್ತಿರುವುದರಿಂದ ಜನರು ಡೀಸೆಲ್ ಕಾರುಗಳನ್ನು ಹೆಚ್ಚು ಹೆಚ್ಚು ಖರೀದಿಸುತ್ತಿದ್ದಾರೆ.

"ಪ್ರಮುಖವಾಗಿ ಹೇಳಬೇಕೆಂದರೆ ಹೊಸ ಕಾರುಗಳ ಮಾರುಕಟ್ಟೆಯಂತೆಯೇ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆ ಟ್ರೆಂಡ್ ಇರುತ್ತದೆ. ಹೆಚ್ಚು ಹೊಸ ಪೆಟ್ರೊಲ್ ಕಾರುಗಳಿಗೆ ಬೇಡಿಕೆಯಿದ್ದಾಗ ಹಳೆಯ ಕಾರುಗಳಿಗೂ ಅದೇ ರೀತಿ ಇರುತ್ತದೆ. ಇದೀಗ ಡೀಸೆಲ್ ಕಾರು ಮಾರಾಟ ಉತ್ತುಂಗದಲ್ಲಿದೆ. ಇದರಿಂದ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ" ಎಂದು ಮಹೀಂದ್ರ ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್ ನ ಸಿಇಒ ಹೇಳಿದ್ದಾರೆ.

ಗ್ರಾಹಕರಿಂದ ಬೇಡಿಕೆ ಗಣನೀಯವಾಗಿ ಏರಿಕೆ ಕಾಣುತ್ತಿರುವುದರಿಂದ ಡೀಲರುಗಳು ಕೂಡ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಸೆಕೆಂಡ್ ಹ್ಯಾಂಡ್ ಡೀಸೆಲ್ ಕಾರುಗಳ ದರ ಕೂಡ ಶೇಕಡ 15-20ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಡೀಲರುಗಳ ಡೀಸೆಲ್ ಕಾರುಗಳ ಸಂಗ್ರಹವೂ ಕಡಿಮೆಯಾಗಿದೆ.

"ಡೀಸೆಲ್ ಕಾರು ಮಾಲಿಕರು ತಮ್ಮ ಕಾರುಗಳನ್ನು ಮಾರಾಟ ಮಾಡಲು ಆಸಕ್ತಿ ವಹಿಸುತ್ತಿಲ್ಲ. ಹೊಸ ಕಾರು ಕೂಡ ಹೆಚ್ಚು ದುಬಾರಿಯಾಗಿದೆ. ಹೀಗಾಗಿ ಸೆಕೆಂಡ್ ಹ್ಯಾಂಡ್ ಡೀಸೆಲ್ ಕಾರುಗಳ ಪೂರೈಕೆ ಕಡಿಮೆಯಾಗಿದೆ" ಎಂದು ಡೀಲರೊಬ್ಬರು ಹೇಳುತ್ತಾರೆ.

"ಗ್ರಾಹಕರು ಡೀಸೆಲ್ ಕಾರುಗಳಿಗೆ ಹೆಚ್ಚು ಪಾವತಿಸಲು ರೆಡಿ ಇದ್ದಾರೆ. ಯಾಕೆಂದರೆ ಅವರಿಗೆ ಡೀಸೆಲ್ ಕಾರುಗಳ ಲಾಭ ನಷ್ಟಗಳ ಕುರಿತು ಅರಿವಿದೆ. ಪೆಟ್ರೊಲ್ ದರ ಏರಿಕೆ ಕಂಡಿರುವುದರಿಂದ ಡೀಸೆಲ್ ಎಂಜಿನ್ ಆಯ್ಕೆ ಮಾಡಿಕೊಳ್ಳುವರ ಸಂಖ್ಯೆಯೂ ಹೆಚ್ಚಾಗಿದೆ" ಎಂದು ಬೆಂಗಳೂರಿನ ಕಾರು ಡೀಲರೊಬ್ಬರು ಅಭಿಪ್ರಾಯಪಡುತ್ತಾರೆ.

ಹೊಸ ಕಾರಿನಷ್ಟೇ ಭಾರತದಲ್ಲಿ ಹಳೆಯ ಕಾರುಗಳು ಮಾರಾಟವಾಗುತ್ತಿವೆ. ಇವೆರಡಕ್ಕೆ ಒಂದೇ ರೀತಿಯ ಬೇಡಿಕೆಯಿದೆ ಎಂದು ಕಾರ್ಜೂಡಾಟ್ ಕಾಮ್ ನ ಉಪಾಧ್ಯಕ್ಷರು ಹೇಳುತ್ತಾರೆ. 2010ರಲ್ಲಿ ಸುಮಾರು 17 ಲಕ್ಷ ಹೊಸ ಕಾರುಗಳು ಮಾರಾಟಗೊಂಡಿವೆ. ಆದರೆ ಇದೇ ಸಮಯದಲ್ಲಿ 18.5 ಲಕ್ಷ ಸೆಕೆಂಡ್ ಹ್ಯಾಂಡ್ ಕಾರುಗಳು ಮಾರಾಟಗೊಂಡಿವೆ.

ಹೊಸ ತಂತ್ರಜ್ಞಾನದೊಂದಿಗೆ ವಾಹನವೊಂದು ಬಂದಾಗ ಹಳೆಯ ವಾಹನದ ಮೇಲಿನ ಮೋಹ ಕಡಿಮೆಯಾಗುತ್ತದೆ. ಭಾರತದಲ್ಲಿ ಒಂದು ವಾಹನದ ಸರಾಸರಿ ಮಾಲಿಕತ್ವ 5 ವರ್ಷವಾದರೂ ಇದೆ. ಆದರೆ ಅಮೆರಿಕದಲ್ಲಿ ಇದು ಈಗಾಗಲೇ ಮೂರು ವರ್ಷಕ್ಕೆ ತಲುಪಿದೆ. ಭಾರತ ಈ ಸ್ಥಾನಕ್ಕೆ ತಲುಪಲು ಇನ್ನೂ ಮೂರರಿಂದ 5 ವರ್ಷಗಳ ಅಗತ್ಯವಿದೆ ಎಂದು ವಿಶ್ಲೇಷಕರು ಅಂದಾಜಿಸುತ್ತಾರೆ.

More from DriveSpark

Article Published On: Monday, August 29, 2011, 15:09 [IST]
English summary
More people preparing diesel cars. This trend reflecting to used car markets. Now diesel cars also dominating in used car Markets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+