ದೇಶದ ರಸ್ತೆಗೆ ಜಾಗ್ವಾರ್ ನ ಎರಡು ವೇಗದ ಕಾರು

ನೂತನ ಸ್ಪೋರ್ಟ್ಸ್ ಕಾರುಗಳು 5.0 ಲೀಟರ್ ನ ಸೂಪರ್ ಚಾರ್ಜಡ್ ಎಂಜಿನ್ ಹೊಂದಿರಲಿವೆ. ಇದು ಅನನ್ಯ 550 ಹಾರ್ಸ್ ಪವರ್ ನೀಡುತ್ತದೆ. 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ಈ ಕಾರು ವೇಗದ ಸವಾರಿಗೆ ಸೂಕ್ತವಾಗಿದೆ.
ಭಾರತದಲ್ಲಿ ಈಗಾಗಲೇ ಕಂಪನಿಯ ಎಕ್ಸ್ಕೆಆರ್ಎಸ್ ಕೂಪ್ ಮಾಡೆಲ್ ಲಭ್ಯವಿದೆ. ಆದರೆ ವಾಹನ ಲೋಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಇನ್ನೆರಡು ವೇಗದ ಕಾರುಗಳನ್ನು ಪರಿಚಯಿಸಲು ಕಂಪನಿ ಬಯಸಿದೆ. ತಾಂತ್ರಿಕವಾಗಿ ನೋಡಿದರೆ ಹೊಸ ಆವೃತ್ತಿಗಳಲ್ಲಿ ಹೊಸದೇನು ಸೇರ್ಪಡೆಯಾಗಿಲ್ಲ. ಆದರೂ ಅದರ ಲುಕ್ ಇನ್ನಷ್ಟು ಆಕರ್ಷಕವಾಗಿದೆ. ಸದ್ಯ ದೇಶದ ರಸ್ತೆಯಲ್ಲಿರುವ ಜಾಗ್ವಾರ್ ಎಕ್ಸ್ ಕೆಆರ್-ಎಸ್ ದರ ಸುಮಾರು 90 ಲಕ್ಷ ರು. ಆಸುಪಾಸಿನಲ್ಲಿದೆ.


Click it and Unblock the Notifications