ಟೊಯೊಟಾ ಬಿಡದಿ ಘಟಕಕ್ಕೆ ತೆರಿಗೆ ವಿನಾಯಿತಿ ನೀಡಿದ ಸರಕಾರ

"ಟೊಯೊಟಾ ಜಂಟಿ ಉದ್ಯಮದ 450 ಕೋಟಿ ರು. ಮೌಲ್ಯದ ಟೂಲ್ಸ್ ಮತ್ತು ಯಂತ್ರೋಪಕರಣಗಳ ಆಮದಿಗೆ 9 ಕೋಟಿ ರು. ತೆರಿಗೆ ವಿನಾಯಿತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರಿಂದಾಗಿ ಕಳೆದ ಎರಡು ವರ್ಷದಿಂದ ಕಂಪನಿಗೆ ರಾಜ್ಯವು ನೀಡಿದ ಒಟ್ಟಾರೆ ತೆರಿಗೆ ವಿನಾಯಿತಿ ಸುಮಾರು 89 ಕೋಟಿ ರು.ಗೆ ತಲುಪಿದೆ" ಎಂದು ವಿ. ಎಸ್. ಆಚಾರ್ಯ ಹೇಳಿದ್ದಾರೆ.
2009ರಲ್ಲಿ ಕಂಪನಿಯು ಬಿಡದಿಯಲ್ಲಿ ಐಷಾರಾಮಿ ಕಾರು ಉತ್ಪಾದನೆಯ ಎರಡನೇ ಘಟಕ ನಿರ್ಮಿಸಲು ಆರಂಭಿಸಿತ್ತು. ಆಗ ಕರ್ನಾಟಕ ರಾಜ್ಯ ಸರಕಾರವು ಸುಮಾರು 80 ಕೋಟಿ ರು. ತೆರಿಗೆ ವಿನಾಯಿತಿ ನೀಡಿತ್ತು.


Click it and Unblock the Notifications








