ಫೋರ್ಸ್ ಮೋಟರ್ಸ್ ನಲ್ಲಿ ನೂರು ಉದ್ಯೋಗ ಖಾಲಿ ಇದೆ

Force Motors
ಸುಮಾರು 100 ಜನರಲ್ ಮ್ಯಾನೆಜರ್ ಮತ್ತು ಉನ್ನತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಫೋರ್ಸ್ ಮೋಟರ್ಸ್ ನಿರ್ಧರಿಸಿದೆ. ಕಂಪನಿಯು ಶೀಘ್ರದಲ್ಲಿ ಫೋರ್ಸ್ ಒನ್ ಎಂಬ ಸ್ಪೋರ್ಟ್ಸ್ ಯುಟಿಲಿಟಿ ಕಾರನ್ನು ಹೊರತರಲಿದೆ.

ಇದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಲು, ಜನರಲ್ ಮೋಟರ್ಸ್, ಮಿಟ್ಸುಬಿಸಿ ಮತ್ತು ಸ್ಕೋಡಾ ಕಂಪನಿಗಳಿಗೆ ಪೈಪೋಟಿ ನೀಡಲು ಸಮರ್ಥ ತಂಡಕಟ್ಟುವ ಕೆಲಸಕ್ಕೆ ಫೋರ್ಸ್ ಮುಂದಾಗಿದೆ. ಇದೇ ಕಂಪನಿಗಳಿಂದ ಉದ್ಯೋಗಿಗಳನ್ನು ಸೆಳೆಯುವ ಯತ್ನವನ್ನೂ ಕಂಪನಿ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ.

ಫೋರ್ಸ್ ಮೋಟರ್ಸ್ ಹಗುರ ವಾಣಿಜ್ಯ ವಾಹನ, ಮೂರು ಚಕ್ರದ ವಾಹನ ತಯಾರಿಕಾ ಕಂಪನಿಯಾಗಿದೆ. ಫೋರ್ಸ್ ಒನ್ ಕಾರಿನ ಮೂಲಕ ದೇಶದ ಎಸ್ ಯುವಿ ಮಾರುಕಟ್ಟೆಗೆ ನುಗ್ಗಲು ಕಂಪನಿ ಮುಂದಾಗಿದೆ. "ನೂತನ ಕಾರಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಸಮರ್ಥ ತಂಡವನ್ನು ಕಟ್ಟಲಿದ್ದೇವೆ" ಎಂದು ಫೋರ್ಸ್ ಮೋಟರ್ಸ್ ನ ಎಂಡಿ ಹೇಳಿದ್ದಾರೆ. ಕಂಪನಿಯು ಫೋರ್ಸ್ ಒನ್ ಲೋಗೊವನ್ನು ಈಗಾಗಲೇ ಅನಾವರಣ ಮಾಡಿದೆ.

ಈಗ ಕಂಪನಿಯ ಪರ್ಸನಲ್ ವೆಹಿಕಲ್ ವಿಭಾಗಕ್ಕೆ ಅಧ್ಯಕ್ಷರಾಗಿ ಸಂಜೀವ್ ಗಾರ್ಗ್ ನೇಮಕಕೊಂಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರಸನ್ನ ಫಿರೊಡಿಯಾ ಇದ್ದಾರೆ. ಉಳಿದಂತೆ ಜನರಲ್ ಮ್ಯಾಜೆಜರ್ ಮತ್ತು ಟಾಪ್ ಎಕ್ಸ್ ಕ್ಯೂಟಿವ್ ಗಳ ಹುಡುಕಾಟದಲ್ಲಿ ಕಂಪನಿಯಿದೆ. ನೀವೂ ಪ್ರಯತ್ನಿಸಬಹುದು.

More from DriveSpark

Article Published On: Monday, June 27, 2011, 10:25 [IST]
English summary
Force Motors hunts 100 professionals at esteemed positions like general manager and senior executive levels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+