ಟೊಯೊಟಾ ಲಿವಾ ರಸ್ತೆಗೆ, ದರ 3.99 ಲಕ್ಷ ರು.

ಇದರಲ್ಲಿ ಜೆ ಆವೃತ್ತಿ ಲಿವಾ ದರ 3.99 ಲಕ್ಷ ರು. ಮತ್ತು ಜಿ ಆವೃತ್ತಿ ದರ 4.59 ಲಕ್ಷ ರು. ಆಗಿದೆ. 1.2 ಲೀಟರ್ ನ ಈ ಕಾರು ದೇಶದ ರಸ್ತೆಯಲ್ಲಿ ಉಳಿದ ಕಾರು ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
2012ರ ವೇಳೆಗೆ ಭಾರತದಲ್ಲಿ ಸುಮಾರು ಒಂದು ಲಕ್ಷ ಎಟಿಯೋಸ್ ಸೆಡಾನ್ ಮತ್ತು ಹ್ಯಾಚ್ ಬ್ಯಾಕ್ ಕಾರುಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ನೂತನ ಲಿವಾ ಕಳೆದ ತಿಂಗಳೇ ರಸ್ತೆಗಿಳಿಯಬೇಕಿತ್ತು. ಆದರೆ ಎಟಿಯೋಸ್ ಕಾರಿಗೆ ವೈಟಿಂಗ್ ಪಿರೇಡ್ ಹೆಚ್ಚಾದ ಹಿನ್ನಲೆಯಲ್ಲಿ ಲಿವಾ ಕಾರನ್ನು ಕೊಂಚ ವಿಳಂಬವಾಗಿ ಹೊರತಂದಿದೆ.
ಇದರೊಂದಿಗೆ ಕಂಪನಿಯು ಬೆಂಗಳೂರಿನ ಎರಡನೇ ಘಟಕಕ್ಕೆ ಸುಮಾರು 3,200 ಕೋಟಿ ರು. ಹೂಡಿಕೆ ಮಾಡಿದೆ. "ಈ ಘಟಕದಲ್ಲಿ ವರ್ಷಕ್ಕೆ ಸುಮಾರು 70 ಸಾವಿರ ಕಾರು ಉತ್ಪಾದಿಸಲು ಸಾಧ್ಯವಾಗಲಿದೆ" ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟರ್ ಎಂಡಿ ಹಿರೋಶಿ ನಕಗವಾ ಹೇಳಿದ್ದಾರೆ.


Click it and Unblock the Notifications








