ಫ್ಲೂಡಿಕ್ ವೆರ್ನಾ: ತಿಂಗಳಲ್ಲಿ 20 ಸಾವಿರ ಬುಕ್ಕಿಂಗ್

ಇತ್ತೀಚೆಗೆ ರಸ್ತೆಗಳಿದ ಕಾರುಗಳಿಗೆ ಹೋಲಿಸಿದರೆ ವೆರ್ನಾ ನೋಡಲು ಆಕರ್ಷಕವಾಗಿರುವುದು ಇದರ ಜನಪ್ರಿಯತೆಗೆ ಪ್ರಮುಖ ಕಾರಣ. ಎರಡನೇ ಕಾರಣವೆಂದರೆ ಅದರ ದರ. ಗ್ರಾಹಕರಿಂದ ಅತ್ಯಧಿಕ ಬೇಡಿಕೆ ಕಾಣುತ್ತಿರುವುದರಿಂದ ಸಹಜವಾಗಿಯೇ ವೈಟಿಂಗ್ ಪಿರೇಡ್ ಹೆಚ್ಚಾಗಿದೆ. ಹೊಸ ವೆರ್ನಾ ಬುಕ್ಕಿಂಗ್ ಮಾಡಿದ ನಂತರ ಗ್ರಾಹಕರು ಈಗ ಸುಮಾರು 4-6 ತಿಂಗಳು ಕಾಯುವುದು ಅನಿವಾರ್ಯ.
2011ರ ವೆರ್ನಾ ಎರಡು ಪೆಟ್ರೊಲ್ ಮತ್ತು ಎರಡು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. ಎರಡೆರಡು ಆವೃತ್ತಿಗಳೇನು ಎಂದರೆ 1.4 ಲೀಟರ್ ಮತ್ತು 1.6 ಲೀಟರ್ ಎಂಜಿನ್ ಗಳಾಗಿವೆ. ಇದರಲ್ಲಿ 1.4 ಲೀಟರ್ ಎಂಜಿನ್ ಆವೃತ್ತಿಗಳಲ್ಲಿ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಇದೆ. 1.6 ಲೀಟರ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ.
ಯಾವುದೇ ಒತ್ತಡವಿಲ್ಲದೇ ಆರಾಮವಾಗಿ ಸವಾರಿ ಮಾಡುವಲ್ಲಿ ಇವೆರಡು ಎಂಜಿನ್ ಗಳು ಅನನ್ಯ ಕ್ಷಮತೆ ನೀಡುತ್ತವೆ. ದೇಶದ ರಸ್ತೆಗೆ ಪೂರಕವಾಗಿರುವ ಇದರ ಸಸ್ಪೆನ್ಸನ್ ಇಷ್ಟವಾಗುತ್ತದೆ. ನೂತನ ವೆರ್ನಾ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 7,08,320 ರು.ನಿಂದ 10,88,826 ರು.ವರೆಗಿದೆ.


Click it and Unblock the Notifications








