ರಸ್ತೆಗಿಳಿಯಲಿದೆ ಲ್ಯಾಂಡ್ ರೋವರ್ "ಗ್ರಾಂಡ್ ಇವೊಕ್ಯೂ"

ಕಂಪನಿ ಹೇಳೋ ಪ್ರಕಾರ ನೂತನ ಇವೊಕ್ಯೂ ದರ ರೇಂಜ್ ರೋವರ್ ಸ್ಪೋರ್ಟ್ ಕಾರಿಗಿಂತ ಕಡಿಮೆ ಇರಲಿದೆ. ಹಳೆಯ ಇವೊಕ್ಯೂ ಕಾರಿಗೆ ಹೋಲಿಸಿದರೆ ನೂತನ ಕಾರು ಹೆಚ್ಚು ಸ್ಥಳವಕಾಶವನ್ನು ಹೊಂದಿರಲಿದೆ.
ರೇಂಜ್ ರೋವರ್ ಕಾರುಗಳ ಟ್ರೇಡ್ ಮಾರ್ಕ್ಸ್ ಎಂದರೆ ಅನನ್ಯ ಡ್ರೈವಿಂಗ್ ಅನುಭವ. ನೂತನ ಸ್ಪೋರ್ಟ್ಸ್ ಕಾರು ಕೂಡ ತನ್ನ ಬೃಹತ್ ಗಾತ್ರ ಮತ್ತು ಇಂಟಿರಿಯರ್ ಸ್ಥಳವಕಾಶದಿಂದ ಹೆಚ್ಚು ಇಷ್ಟವಾಗುವಂತಿದೆ. ನೂತನ ಕಾರು 2.2 ಲೀಟರ್ ಡೀಸಲ್ ಮತ್ತು 2.0 ಲೀಟರ್ ಪೆಟ್ರೊಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ.
ಜಾಗ್ವಾರ್ ಲ್ಯಾಂಡ್ ರೊವರ್ ಕುಟುಂಬದ ಸದಸ್ಯ ಜಾಗ್ವಾರ್ ಜಾಗತಿಕವಾಗಿ ಐಷಾರಾಮಿ ಕಾರು ಮಾರುಕಟ್ಟೆ ಹೆಚ್ಚಿಸಲು ನಿರ್ಧರಿಸಿದೆ. ನೂತನ ಇವೊಕ್ಯೂ ದೇಶದ ರಸ್ತೆಗೆ ಮುಂದಿನ ವರ್ಷ ತಲುಪುವ ನಿರೀಕ್ಷೆಯಿದೆ. ಕಂಪನಿಯು ದೇಶದಲ್ಲಿ ಡೀಲರ್ ನೆಟ್ ವರ್ಕ್ ಗಳನ್ನು ಹೆಚ್ಚಿಸಲು ಕೂಡ ನಿರ್ಧರಿಸಿದೆ. ಕಂಪನಿಯು ಬೆಂಗಳೂರು, ಚೆನ್ನೈ, ಕೊಚ್ಚಿ, ಲುದಿಯಾನ, ಅಹಮಾದಬಾದ್, ಪುಣೆ, ಜೈಪುರ ಮತ್ತು ಇಂದೊರ್ ಗಳಲ್ಲಿ ಡೀಲರ್ ನೆಟ್ ವರ್ಕ್ ವಿಸ್ತರಿಸಲು ನಿರ್ಧರಿಸಿದೆ.


Click it and Unblock the Notifications