ಆಡಿ ಕ್ಯೂ3 2012ರ ಆರಂಭದಲ್ಲಿ ರಸ್ತೆಗಿಳಿಯೋದು ಗ್ಯಾರಂಟಿ

ದೇಶದ ರಸ್ತೆಯಲ್ಲಿ ಬಿಎಂಡಬ್ಲ್ಯು ಎಕ್ಸ್1 ಜನಪ್ರಿಯತೆ ನೋಡಿ ಆಡಿ ಕಣ್ಣು ಕೆಂಪಗಾಗಿದೆ. ಇಲ್ಲಿನ ಐಷಾರಾಮಿ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಲು ಕಾರ್ಯತಂತ್ರ ರೂಪಿಸಿದೆ. ನೂತನ ಕಾರು ಮುಂದಿನ ವರ್ಷದ ಆರಂಭದಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ. ಅಂದರೆ ಇನ್ನು ಆರೇಳು ತಿಂಗಳು ಕಾದರೆ ಸಾಕು.
ಆಡಿ ಕ್ಯೂ3 ಖಂಡಿತವಾಗಿಯೂ ಬಿಎಂಡಬ್ಲ್ಯು ಕಾರಿಗೆ ಹೊಸ ಪೈಪೋಟಿ ನೀಡಲಿದೆ. ಈಗಾಗಲೇ ಎಕ್ಸ್1 ದೇಶದ ರಸ್ತೆಯಲ್ಲಿ ಪ್ರಬಲವಾಗಿದೆ. ನೂತನ ಆಡಿ ಕ್ಯೂ3 ಕಾರಿನ ದರ ಸುಮಾರು 25 ಲಕ್ಷ ರು. ಆಸುಪಾಸಿನಲ್ಲಿರಲಿದೆ. ಈ ದರಕ್ಕೆ ದೊರಕಿದರೆ ಕೇವಲ ಎಕ್ಸ್1 ಮಾತ್ರವಲ್ಲದೇ ಫಾರ್ಚ್ಯುನರ್, ಸಿಆರ್ವಿ, ಸಾಂಟಾ ಫೆ ಮತ್ತು ಇತರ ಕಾಂಪ್ಯಾಕ್ಟ್ ಸ್ಪೋರ್ಟ್ಸ್ ಯುಟಿಲಿಟಿ ಕಾರುಗಳಿಗೆ ಹೊಡೆತ ನೀಡಲಿದೆ.


Click it and Unblock the Notifications








