ತೆರಿಗೆ ವಿನಾಯ್ತಿ ಖುಷಿ, ಟೊಯೊಟಾ ಬಿಡದಿ ಘಟಕ ವಿಸ್ತರಣೆ

ಎರಡನೇ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕವಾಗಿ 70,000 ಯೂನಿಟ್ ಗಳಿಂದ 1.20 ಲಕ್ಷ ಯೂನಿಟ್ ಗೆ ಏರಿಸಲಾಗುವುದು. ಸುಮಾರು 216 ಕೋಟಿ ರು ಬಂಡವಾಳ ಹೂಡಲಾಗುವುದು. 2012ರಲ್ಲಿ ಹೊಸ ಘಟಕ ತನ್ನ ಗುರಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಶೆಟ್ಟಿ ಹೇಳಿದರು.
ಸುಮಾರು 21,000 ಇಟಿಯೋಸ್ ಕಾರುಗಳು ಮಾರಾಟವಾಗಿದೆ. ಈ ವರ್ಷ ಇಟಿಯೋಸ್ ಹಾಗೂ ಲಿವಾ ಮಾರಾಟ, ಪ್ರಚಾರಕ್ಕೆ ಮೀಸಲಿಡಲಾಗಿದೆ. ಒಟ್ಟಾರೆ ಸುಮಾರು 60 ಸಾವಿರ ಕಾರು ಮಾರಾಟ ನಿರೀಕ್ಷೆಯಿದೆ. ಈಗಿರುವ 150 ಡೀಲರ್ ಗಳ ಸಂಖ್ಯೆ 175ಕ್ಕೆ ಹೆಚ್ಚಿಸಲಾಗುವುದು. ಬಿಡದಿಯಲ್ಲಿ ನಮ್ಮ ಕಂಪೆನಿ ಏಳಿಗೆ ಕಾಣುತ್ತಿದೆ. ರಾಜ್ಯ ಸರ್ಕಾರ ಕೂಡಾ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿರುವುದು ಹೆಚ್ಚಿನ ಉತ್ತೇಜನ ನೀಡಿದೆ ಎಂದು ಶೆಟ್ಟಿ ಹೇಳಿದೆ.


Click it and Unblock the Notifications








