ಯೂನಿಯನ್ ಚುನಾವಣೆಗೆ ಮಾರುತಿ ನೌಕರರ ಬಹಿಷ್ಕಾರ

ನೂತನ ಕಾರ್ಮಿಕರ ಸಂಘಟನೆಯನ್ನು ಮಾರುತಿ ಸುಜುಕಿ ಅಂಗೀಕರಿಸದಿರುವುದೇ ಬಹಿಷ್ಕಾರಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಲು ಕಂಪನಿ ನಿರಾಕರಿಸಿದೆ.
"ನಾವು ಯೂನಿಯನ್ ಎಲೆಕ್ಷನ್ ಗೆ ಯಾವುದೇ ಸಿದ್ಧತೆ ನಡೆಸುವುದಿಲ್ಲ. ಸಂಪೂರ್ಣವಾಗಿ ಚುನಾವಣೆಯನ್ನು ಬಹಿಷ್ಕಾರಿಸುತ್ತೇವೆ. ಗುರ್ ಗಾಂವ್ ಮತ್ತು ಮಾನೆಸರ್ ಘಟಕದಲ್ಲಿ ಯೂನಿಯನ್ ಎಲೆಕ್ಷನ್ ಎಂಬುದು ಕೇವಲ ಕಾಟಾಚಾರದಾಗಿದೆ. ಯಾವುದೇ ಪ್ರಯೋಜನಕಾರಿಯಾಗಿಲ್ಲ ಎಂಬುದು ನಮಗೆ ವೇದನೆ ತರುತ್ತದೆ" ಎಂದು ಮಾರುತಿ ಸುಜುಕಿ ನೌಕರರ ಒಕ್ಕೂಟ(ಎಂಎಸ್ಇಯು) ಪ್ರಧಾನ ಕಾರ್ಯದರ್ಶಿ ಶಿವ್ ಕುಮಾರ್ ಹೇಳಿದ್ದಾರೆ.
"ಕಂಪನಿಯ ಆಡಳಿತವು ಯೂನಿಯನ್ ಎಲೆಕ್ಷನ್ ನಲ್ಲಿ ಭಾಗಿಯಾಗುವುದಿಲ್ಲ. ಈ ಚುನಾವಣೆ ಎರಡು ಘಟಕದಲ್ಲೂ ನಡೆಯುತ್ತದೆ" ಎಂದು ಮಾರುತಿ ಸುಜುಕಿ ಚೇರ್ಮನ್ ಆರ್. ಸಿ. ಭಾರ್ಗವ ಹೇಳಿದ್ದಾರೆ.
"ಚುನಾವಣೆ ಬಹಿಷ್ಕಾರದ ಕುರಿತು ನೌಕರರಿಂದ ಯಾವುದೇ ನೋಟಿಸ್ ನಮಗೆ ದೊರಕಿಲ್ಲ" ಎಂದು ಕಂಪನಿಯ ವಕ್ತಾರರು ಹೇಳುತ್ತಾರೆ. ಕಂಪನಿಯು ಅನಧಿಕೃತ ಸಂಘಟನೆಯೊಂದಿಗೆ ಯಾವುದೇ ಮಾತುಕತೆ ನಡೆಸಲು ಇಚ್ಚಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.


Click it and Unblock the Notifications








