ಶೀಘ್ರದಲ್ಲಿ ನಿರೀಕ್ಷಿಸಿ: ಹೊಸ ಮಾರುತಿ ಸುಜುಕಿ ಸ್ವಿಫ್ಟ್

ಕಂಪನಿಯು ಪ್ರಸಕ್ತ ವರ್ಷದ ಆಗಸ್ಟ್ ಅಂತ್ಯದಲ್ಲಿ ಅಥವಾ ಸೆಪ್ಟಂಬರ್ ವೇಳೆಗೆ ಸ್ವಿಫ್ಟ್ ನ ಹೊಸ ಆವೃತ್ತಿಯೊಂದನ್ನು ಹೊರತರಲಿದೆಯಂತೆ. ದೀಪಾವಳಿಗೆ ಕಾರು ಕೊಳ್ಳಲು ಬಯಸುವರು ನೂತನ ಸ್ವಿಫ್ಟ್ ಕಡೆಗೊಂದು ಕಣ್ಣಿಟ್ಟುಕೊಳ್ಳಬಹುದು.
ಇದೀಗ ಎಲ್ಲರೂ ಇಂಧನ ದಕ್ಷತೆಯ ಕುರಿತು ಮಾತನಾಡುತ್ತಿದ್ದಾರೆ. ರಸ್ತೆಗಿಳಿಯಲಿರುವ ನೂತನ ಸ್ವಿಫ್ಟ್ ಹೆಚ್ಚು ಮೈಲೇಜ್ ಹೊಂದಿರುವ ಕಾರಾಗಿರುವ ನಿರೀಕ್ಷೆಯಿದೆ. ನೂತನ ಸ್ವಿಫ್ಟ್ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಆವೃತ್ತಿಗಳಲ್ಲಿ ರಸ್ತೆಗಿಳಿಯಲಿದೆ ಎಂದು ವರದಿಗಳು ಹೇಳಿವೆ.
ಹಳೆಯ ಸ್ವಿಫ್ಟ್ ಗೆ ಹೋಲಿಸಿದರೆ ನೂತನ ಸ್ವಿಫ್ಟ್ ಗಾತ್ರ ಹೆಚ್ಚಿರುವ ನಿರೀಕ್ಷೆಯಿದೆ. ಲೋಹದ ಇಂಧನ ಟ್ಯಾಂಕ್ ಗೆ ಬದಲಾಗಿ ಪ್ಲಾಸ್ಟಿಕ್ ಟ್ಯಾಂಕ್ ಅಳವಡಿಸುವ ಮೂಲಕ ನೂತನ ಸ್ವಿಫ್ಟ್ ನ ಭಾರವನ್ನು ಎಂಜಿನಿಯರ್ ಗಳು ತಗ್ಗಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದರಿಂದಾಗಿ ಇಂಧನ ದಕ್ಷತೆ ಕೂಡ ಹೆಚ್ಚಾಗಲಿದೆ.
ಮಾರುತಿ ಸುಜುಕಿ ಸ್ವಿಫ್ಟ್ ರಸ್ತೆಗಿಳಿದು ಸುಮಾರು 6 ವರ್ಷ ಕಳೆದ ನಂತರ ಮೊದಲ ಬಾರಿಗೆ ಸ್ವಿಫ್ಟ್ ಫೇಸ್ ಲಿಫ್ಟ್ ಮಾಡುತ್ತಿದೆ. ನೂತನ ಸ್ವಿಫ್ಟ್ ದರದ ಕುರಿತು ಕಂಪನಿ ಮಾಹಿತಿ ನೀಡಿಲ್ಲ.
ನೂತನ ಪೆಟ್ರೋಲ್ ಆವೃತ್ತಿ ಪ್ರತಿಲೀಟರ್ ಗೆ ಸುಮಾರು 20 ಕಿ.ಮೀ. ಮೈಲೇಜ್ ನೀಡಲಿದೆ. ಸದ್ಯ ರಸ್ತೆಯಲ್ಲಿರುವ ಪೆಟ್ರೋಲ್ ಸ್ವಿಫ್ಟ್ ಲೀಟರ್ ಗೆ 17.9 ಕಿ.ಮೀ. ಮೈಲೇಜ್ ನೀಡುತ್ತಿದೆ. ನೂತನ ಡೀಸಲ್ ಆವೃತ್ತಿ ಕೂಡ ಪ್ರತಿಲೀಟರ್ ಗೆ 23.8 ಕಿ.ಮೀ. ಮೈಲೇಜ್ ನೀಡುತ್ತದೆ. ಸದ್ಯ ರಸ್ತೆಯಲ್ಲಿರುವ ಡೀಸಲ್ ಸ್ವಿಫ್ಟ್ ಪ್ರತಿಲೀಟರ್ ಗೆ 21 ಕಿ.ಮೀ. ಮೈಲೇಜ್ ನೀಡುತ್ತಿದೆ.
ನೂತನ ಸ್ವಿಫ್ಟ್ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ ಎಂದು ವರದಿಗಳು ಹೇಳಿವೆ. ಈಗ ರಸ್ತೆಯಲ್ಲಿರುವ ಸ್ವಿಫ್ಟ್ ಕಾರುಗಳು 5 ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿವೆ.
ಈಗ ಸ್ವಿಫ್ಟ್ ಕಾರುಗಳು ಪೆಟ್ರೋಲ್, ಡೀಸಲ್ ಮತ್ತು ಸಿಎನ್ ಜಿ ವರ್ಷನ್ ಗಳಲ್ಲಿ ದೊರಕುತ್ತಿವೆ. ಇವುಗಳ ದರ 3.9 ಲಕ್ಷ ರು.ನಿಂದ 5.5 ಲಕ್ಷ ರು.ವರೆಗಿವೆ. ಕಂಪನಿಯು ಪ್ರತಿತಿಂಗಳು ಸುಮಾರು 12 ಸಾವಿರ ಸ್ವಿಫ್ಟ್ ಕಾರುಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications








