ಎಟಿಯೋಸ್ ಶೈನಿಂಗ್, ಟೊಯೊಟಾ ಫುಲ್ ಖುಷ್

Etios liva
ಎಟಿಯೋಸ್ ಸೆಡಾನ್ ಕಾರು ದೇಶದ ರಸ್ತೆಗಿಳಿದ ನಂತರ ಟೊಯೊಟಾ ಫುಲ್ ಖುಷ್ ಆಗಿದೆ. ಕಳೆದ ತಿಂಗಳು ಸುಮಾರು 37 ಸಾವಿರ ಕಾರುಗಳಿಗೆ ಬುಕ್ಕಿಂಗ್ ಆಗಿದೆ. ಇದರಲ್ಲಿ ಜೂನ್ 27ರಂದು ಬಿಡುಗಡೆಗೊಂಡ ಎಟಿಯೋಸ್ ಲಿವಾಕ್ಕೆ ಸುಮಾರು 1,400 ಗ್ರಾಹಕರು ಆರ್ಡರ್ ಮಾಡಿದ್ದಾರೆ.

ಎಟಿಯೋಸ್ ಲಿವಾದ ಮೂಲಕ ಟೊಯೊಟಾ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ಗೆ ಪಾದಾರ್ಪಣೆ ಮಾಡಿತ್ತು. ಇದರ ದರ ಕೂಡ ಕಡಿಮೆ ಇರುವುದರಿಂದ ಭಾರತದ ಗ್ರಾಹಕರಿಗೆ ಹೆಚ್ಚು ಇಷ್ಟವಾದಂತ್ತಿದೆ. ಇದರ ದರ ಸುಮಾರು 3.90 ಲಕ್ಷ ರು.ನಿಂದ ಆರಂಭವಾಗುತ್ತದೆ.

ಟೊಯೊಟಾದೊಂದಿಗೆ ಫೋಕ್ಸ್ ವ್ಯಾಗನ್, ಜನರಲ್ ಮೋಟರ್ಸ್ ಮತ್ತು ನಿಸ್ಸಾನ್ ಮೋಟರ್ ಕೂಡ ಭಾರತದಲ್ಲಿ ವಹಿವಾಟು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಈ ಕಂಪನಿಗಳು ಎಂಟ್ರಿ ಲೆವೆಲ್ ಕಾರುಗಳನ್ನು ಭಾರತ ಮತ್ತು ಬ್ರೆಝಿಲ್ ದೇಶಗಳಿಗೆ ಪರಿಚಯಿಸಲು ನಿರ್ಧರಿಸಿವೆ.

"ಭಾರತದಲ್ಲಿ ಅತ್ಯಧಿಕ ಪೈಪೋಟಿ ಇರುವ ಹಿನ್ನಲೆಯಲ್ಲಿ ನಾವು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇಲ್ಲಿ ಅಗ್ಗದ ಹ್ಯಾಚ್ ಬ್ಯಾಕ್ ಕಾರಿಗೆ ಹೆಚ್ಚು ಬೇಡಿಕೆಯಿದೆ" ಎಂದು ಎಟಿಯೋಸ್ ನ ಪ್ರಧಾನ ಎಂಜಿನಿಯರ್ ಯೊಶಿನೊರಿ ನೊರಿಟೆಕ್ ಅಭಿಪ್ರಾಯಪಟ್ಟಿದ್ದಾರೆ.

More from DriveSpark

Article Published On: Wednesday, July 13, 2011, 11:15 [IST]
English summary
Toyota Motors, received overwhelming response in the initial months after unveiling the sedan Etios in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+