ದೆವ್ವದಂಥ ಕಾರು ಖರೀದಿಸಿದ ಅಮೀರ್ ಖಾನ್
ಕಾರು ಕ್ರೇಝ್ ಹೊಂದಿರುವ ಹಮ್ಮೀರನಿಗೆ ಕಾರು ಫ್ಯಾನ್ಸಿ ನಂಬರ್ ಕ್ರೇಝ್ ಕೂಡ ಇದೆ. ನೂತನ ಘೋಸ್ಟ್ ನಂಬರ್ ಎಂಎಚ್ 11 ಎಎಕ್ಸ್1. ಬ್ರಿಟನ್ ಕಾರು ಕಂಪನಿ ರೋಲ್ಸ್ ರಾಯ್ಸ್ ಇತ್ತೀಚಿನ ಐಷಾರಾಮಿ ಕಾರೆಂದರೆ ಘೋಸ್ಟ್. ಘೋಸ್ಟ್ ಪದದ ಅರ್ಥ- ಪಿಶಾಚಿ, ದೆವ್ವ, ಭೂತ, ಪ್ರೇತ. ಹೀಗಾಗಿ ಅಮೀರ್ ಖಾನ್ ಪಿಶಾಚಿ, ದೆವ್ವ, ಪ್ರೇತ ಕಾರಿನ ಪ್ರೇಮಕ್ಕೆ ಬಿದ್ದಿದ್ದಾರೆ ಎಂದರೆ ನೀವು ಬೆಚ್ಚಿ ಬೀಳುವುದಿಲ್ಲ ತಾನೆ?
ನೂತನ ರೋಲ್ಸ್ ರಾಯ್ಸ್ ಘೋಸ್ಟ್ ಸ್ಪೋರ್ಟ್ಸ್ ರೈಡ್ ಗೆ ಸೂಕ್ತವಾದ ಕಾರು. ಇದು ಬಿಎಂಡಬ್ಲ್ಯುನ 6 ಲೀಟರ್ ಎಂಜಿನ್ ಹೊಂದಿದೆ. ಕೇವಲ 5 ಸೆಕೆಂಡಿನಲ್ಲಿ ಇದರಲ್ಲಿ 100 kmph ವೇಗ ಪಡೆದುಕೊಳ್ಳಬಹುದಾಗಿದೆ.
ಅಮೀರ್ ಖಾನ್ ನ ಕಾರು ಗ್ಯಾರೇಜಿಗೆ ಘೋಸ್ಟ್ ಹೊಸ ಅತಿಥಿ. ಈ ಕಾರು ರೋಲ್ಸ್ ರಾಯ್ಸ್ ಫಂಟೊಮ್ ಗಿಂತ ಚಿಕ್ಕದು. ಕಳೆದ ವರ್ಷ ಘೋಸ್ಟ್ ಕಾರು ದೇಶದ ರಸ್ತೆಗಿಳಿದಿತ್ತು. ಈ ಕಾರು ಬಾಲಿವುಡ್ ನಟರಿಗೆ ಸೂಕ್ತವಾಗಿದೆ ಎಂದು ಕಂಪನಿ ಹೇಳಿರುವುದನ್ನು ಈಗ ನೆನಪಿಸಿಕೊಳ್ಳಬಹುದು. ಅಮೀರ್ ಕಂಪನಿಯ ಮಾತನ್ನು ಸಾಕಾರಗೊಳಿಸಿದ್ದಾರೆ.
ನೂತನ ರೋಲ್ಸ್ ರಾಯ್ಸ್ ಘೋಸ್ಟ್ ಗೆ ಅಮೀರ್ 3.1 ಕೋಟಿ ರು. ಪಾವತಿಸಿದ್ದಾರೆ. ಜೊತೆಗೆ ಆರ್ ಟಿಒಗೆ 47 ಲಕ್ಷ ರು. ಪಾವತಿಸಿದ್ದಾರೆ. ಇದರೊಂದಿಗೆ ಫ್ಯಾನ್ಸಿ ಕಾರು ನಂಬರಿಗಾಗಿ 3 ಲಕ್ಷ ರು. ಪಾವತಿಸಿದ್ದಾರೆ.


Click it and Unblock the Notifications









