ಅಸಹಿಷ್ಣುತೆ ನಾಡಲ್ಲಿ ಅಮೀರ್‌ಗೆ ಭದ್ರತೆಯನ್ನು ಕೊಟ್ಟಿತೇ ಇನ್ ಕ್ರೆಡಿಬಲ್ ಕಾರುಗಳು?

By Nagaraja

ಭಾರತದಲ್ಲಿ ಅಸಹಿಷ್ಣುತೆ ಇದೆ ಎಂಬ ವಿವಾದತ್ಮಾಕ ಹೇಳಿಕ ನೀಡಿ ಕೋಟ್ಯಂತರ ಭಾರತೀಯರ ಕೆಂಗೆಣ್ಣಿಗೆ ಗುರಿಯಾಗಿರುವ ಬಾಲಿವುಡ್ ನ 'ಮಿಸ್ಟರ್ ಫರ್ಫೆಕ್ಷನಿಸ್ಟ್' ನಟ ಅಮೀರ್ ಖಾನ್ 2016 ಮಾರ್ಚ್ 14ರಂದು ತಮ್ಮ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ

Also Read: ಬಾಂಬ್, ಬುಲೆಟ್ ಪ್ರೂಫ್ ಬೆಂಝ್ ಕಾರು ಖರೀದಿಸಿದ ಅಮೀರ್ ಖಾನ್

ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದ್ದು, ಅಭದ್ರತೆ ಕಾಡುತ್ತಿದೆ ಎಂದು ಅಮೀರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ಇದರ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆ ಜರುಗಿತ್ತಲ್ಲದೆ, ಕೇಂದ್ರ ಸರಕಾರ ಪ್ರವಾಸೋದ್ಯಮ ಇಲಾಖೆಯ ಇನ್ ಕ್ರೆಡಿಬಲ್ ಇಂಡಿಯಾ ಪ್ರಚಾರ ಅಭಿಯಾನದಿಂದಲೂ ಕೈಬಿಡಲಾಗಿತ್ತು. ಸತ್ಯಮೇವ ಜಯತೇ ಎಂಬ ಟಿ.ವಿ ಕಾರ್ಯಕ್ರಮ ಮೂಲಕ ಜನರಿಗೆ ಹತ್ತಿರವಾಗಿದ್ದ ಅಮೀರ್ ತಮ್ಮದೇ ಹೇಳಿಕೆಯಿಂದಾಗಿ ಪೇಚಿಗೆ ಸಿಲುಕಿದ್ದರು. ಪ್ರಸ್ತುತ ಲೇಖನದಲ್ಲಿ ಅಮೀರ್ ಗೆ ಭದ್ರತೆ ನೀಡುವ ಕಾರು ಸಂಗ್ರಹಗಳ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

ಬೆಂಟ್ಲಿ ಕಾಂಟಿನೆಂಟಲ್ ಜಿಟಿ

ಬೆಂಟ್ಲಿ ಕಾಂಟಿನೆಂಟಲ್ ಜಿಟಿ

ಬ್ರಿಟನ್ ಕಾರು ನಿರ್ಮಾಣ ಸಂಸ್ಥೆ ಬೆಂಟ್ಲಿ ನಿರ್ಮಿಸಿರುವ ಅತಿ ದುಬಾರಿ ಗ್ರ್ಯಾಂಡ್ ಟೂರರ್ ಕಾರು ಇದಾಗಿದೆ. ಬೆಂಟ್ಲಿ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ 2003ರಲ್ಲಿ ಬಿಡುಗಡೆ ಮಾಡಿದ ಮೊದಲ ಕಾರು ಕಾಂಟಿನೆಂಟಲ್ ಜಿಟಿ ಆಗಿದೆ.

ಬೆಂಟ್ಲಿ ಕಾಂಟಿನೆಂಟಲ್ ಜಿಟಿ

ಬೆಂಟ್ಲಿ ಕಾಂಟಿನೆಂಟಲ್ ಜಿಟಿ

ಸದ್ಯ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಭಾರತದಲ್ಲಿ ದೆಹಲಿ ಎಕ್ಸ್ ಶೋ ರೂಂ ಪ್ರಕಾರ 3.28 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ. ಇದರಲ್ಲಿರುವ 3993 ಸಿಸಿ ಪೆಟ್ರೋಲ್ ಎಂಜಿನ್ 500 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಎಂಟು ಸ್ಪೀಡ್ ಜೊತೆಗೆ ಆಟೋಮ್ಯಾಟಿಕ್ ಆಲ್ ವೀಲ್ ಚಾಲನಾ ವ್ಯವಸ್ಥೆಯನ್ನು ಹೊಂದಿರುತ್ತದೆ.

ಬಿಎಂಡಬ್ಲ್ಯು 6 ಸಿರೀಸ್

ಬಿಎಂಡಬ್ಲ್ಯು 6 ಸಿರೀಸ್

ದೇಶದ ಪ್ರೀಮಿಯಂ ಸೆಡಾನ್ ಕಾರುಗಳಲ್ಲಿ ಬಿಎಂಡಬ್ಲ್ಯು 6 ಸಿರೀಸ್ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡಿದೆ. ಇದು ಭಾರತದಲ್ಲಿ ದೆಹಲಿ ಎಕ್ಸ್ ಶೋ ರೂಂ ಆರಂಭಿಕ ಬೆಲೆ 1.10 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಬಿಎಂಡಬ್ಲ್ಯು 6 ಸಿರೀಸ್

ಬಿಎಂಡಬ್ಲ್ಯು 6 ಸಿರೀಸ್

2993 ಸಿಸಿ ಡೀಸೆಲ್ ಆಟೋಮ್ಯಾಟಿಕ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬಿಎಂಡಬ್ಲ್ಯು 6 ಸಿರೀಸ್ ಎಂ6 ಗ್ರ್ಯಾನ್ ಕೂಪೆ ಆವೃತ್ತಿಯಲ್ಲೂ ಮಾರಾಟವಾಗುತ್ತಿದೆ. ಇದರ ಎಕ್ಸ್ ಶೋ ರೂಂ ಬೆಲೆ 1.71 ಕೋಟಿ ರು.ಗಳಾಗಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಫಾಟಂ

ರೋಲ್ಸ್ ರಾಯ್ಸ್ ಘೋಸ್ಟ್ ಫಾಟಂ

ಬ್ರಿಟನ್‌ನ ಮಗದೊಂದು ಕಾರು ಸಂಸ್ಥೆ ರೋಲ್ಸ್ ರಾಯ್ಸ್ ಜೊತೆಗೆ ತನ್ನ ಪ್ರೀತಿಯನ್ನು ಹಂಚಿಕೊಂಡಿರುವ ಅತಿ ದುಬಾರಿ ರೋಲ್ಸ್ ರಾಯ್ಸ್ ಫೋಗ್ಸ್ ಫಾಟಂ ಕಾರನ್ನು ಖರೀದಿಸಿದ್ದರು. ವಾಹನೋದ್ಯಮದಲ್ಲಿ ಐತಿಹಾಸಿಕ ಇತಿಹಾಸ ಪರಂಪರೆಯನ್ನು ಹೊಂದಿರುವ ರೋಲ್ಸ್ ರಾಯ್ಸ್ ಕಾರುಗಳನ್ನು ಓಡಿಸುವುದು ಪ್ರತಿಯೊಬ್ಬ ಸೆಲೆಬ್ರಿಟಿಯ ಕನಸಾಗಿರುತ್ತದೆ.

ರೋಲ್ಸ್ ರಾಯ್ಸ್ ಘೋಸ್ಟ್ ಫಾಟಂ

ರೋಲ್ಸ್ ರಾಯ್ಸ್ ಘೋಸ್ಟ್ ಫಾಟಂ

6592 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ರೋಲ್ಸ್ ರಾಯ್ಸ್ ಘೋಸ್ಟ್ ಫಾಟಂ 563 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಅಂದಾಜು ಐದು ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಲ್ಯಾಂಡ್ ರೋವರ್ ರೇಂಜ್ ರೋವರ್

ಲ್ಯಾಂಡ್ ರೋವರ್ ರೇಂಜ್ ರೋವರ್

ಐಷಾರಾಮಿ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಅದ್ಭುತ ಚಾಲನಾ ಅನುಭವ ನೀಡುತ್ತಿರುವ ಬ್ರಿಟನ್‌ನ ರೇಂಜ್ ರೋವರ್ ಅಧೀನತೆಯನ್ನು ಟಾಟಾ ಸಂಸ್ಥೆ ಹೊಂದಿದೆ.

ರೇಂಜ್ ರೋವರ್

ರೇಂಜ್ ರೋವರ್

ಭಾರತದಲ್ಲಿ ರೇಂಜ್ ರೋವರ್ ಕಾರುಗಳು ಒಂದು ಕೋಟಿ ರುಪಾಯಿಗಿಂತಲೂ ಹೆಚ್ಚು ಬೆಲೆ ಬಾಳುತ್ತಿದೆ. ಅಲ್ಲದೆ ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಒದಗಿಸುತ್ತಿದೆ.

ಟೊಯೊಟಾ ಫಾರ್ಚ್ಯುನರ್

ಟೊಯೊಟಾ ಫಾರ್ಚ್ಯುನರ್

ಭಾರತದ ಲಗ್ಷುರಿ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಟೊಯೊಟಾ ಫಾರ್ಚ್ಯುನರ್ ಹೆಚ್ಚಿನ ಜನಪ್ರಿಯತೆ ಸಾಧಿಸಿದೆ. ಹಲವು ರಾಜಕಾರಣಿಗಳ ಜೊತೆಗೆ ಅಮೀರ್ ಪಾಲಿಗೂ ಫೇವರಿಟ್ ಗಾಡಿಯೆನಿಸಿದೆ.

ಟೊಯೊಟಾ ಫಾರ್ಚ್ಯುನರ್

ಟೊಯೊಟಾ ಫಾರ್ಚ್ಯುನರ್

2982 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟೊಯೊಟಾ ಫಾರ್ಚ್ಯುನರ್ 25 ಲಕ್ಷ ರು.ಗಿಂತಲೂ ಹೆಚ್ಚು ದುಬಾರಿಯೆನಿಸಿದೆ. ಇದು ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ವೆರಿಯಂಟ್ ಗಳಲ್ಲೂ ಲಭ್ಯವಿರುತ್ತದೆ.

.

ಮರ್ಸಿಡಿಸ್ ಬೆಂಝ್ ಎಸ್600

ಮರ್ಸಿಡಿಸ್ ಬೆಂಝ್ ಎಸ್600

ಜನಪ್ರಿಯ ಟಿವಿ ಕಾರ್ಯಕ್ರಮ ಸತ್ಯಮೇವ ಜಯತೇ ಬಳಿಕ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಂಬ್ ಫ್ರೂಪ್ ಸಾಮರ್ಥ್ಯದ ಮರ್ಸಿಡಿಸ್ ಬೆಂಝ್ ಎಸ್600 ಗಾರ್ಡ್ ಕಾರನ್ನು ಅಮೀರ್ ಖಾನ್ ಖರೀದಿಸಿದ್ದರು.

ಮರ್ಸಿಡಿಸ್ ಬೆಂಝ್ ಎಸ್600

ಮರ್ಸಿಡಿಸ್ ಬೆಂಝ್ ಎಸ್600

ಬೆಂಝ್ ಎಸ್600 ಕಸ್ಟಮೈಸ್ಡ್ ಕಾರಾಗಿದ್ದು, ವಿಶೇಷವಾಗಿಯೂ ವಿವಿಐಪಿಗಳಿಗಾಗಿ ಸಿದ್ಧಪಡಿಸಲಾಗುತ್ತದೆ. ಗರಿಷ್ಠ ಸುರಕ್ಷತೆಗಳನ್ನು ಹೊಂದಿರುವ ಈ ದುಬಾರಿ ದರ ಎಷ್ಟು ಗೊತ್ತೇ? ಗಾಬರಿಯಾಗದಿರಿ, ಇದರ ಬೆಲೆ ಜಸ್ಟ್ 10 ಕೋಟಿ ರುಪಾಯಿಗಳು.

ಇವನ್ನೂ ಓದಿ...

10 ಕೋಟಿ ಬೆಲೆಬಾಳುವ ಬೆಂಝ್ 'ಬಾಂಬ್ ಪ್ರೂಫ್' ಕಾರು ಖರೀದಿಸಿದ ಶಾರೂಕ್

ಅಮೀರ್ ಜತೆ ಧೂಮ್ 3 ಸಂಭ್ರಮ

More from DriveSpark

Article Published On: Tuesday, March 15, 2016, 16:09 [IST]
English summary
Mr Perfectionist Aamir khan Car Collections
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+