ಬೆಂಝ್ ತಂತ್ರ: ವೆಚ್ಚ ಕಡಿತದ ಮೂಲಕ ಮಾರಾಟ ಹೆಚ್ಚಳ

"ನಾವು ಪ್ರಮುಖ ಮಾಡೆಲ್ ಗಳನ್ನು ಪೂರ್ಣಪ್ರಮಾಣದಲ್ಲಿ ಭಾರತದಲ್ಲಿಯೇ ಉತ್ಪಾದಿಸುವ ಕುರಿತು ಯೋಚಿಸುತ್ತಿದ್ದೇವೆ" ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಪೀಟರ್ ಹೊನೆಂಗ್ "ಭಾರತದ ಗ್ರಾಹಕರು ಎಂ ಕ್ಲಾಸ್ ಕಾರುಗಳಿಗೆ ಹೆಚ್ಚು ಬೇಡಿಕೆಯಿಡುತ್ತಿದ್ದಾರೆ. ಇದರೊಂದಿಗೆ ಎ ಮತ್ತು ಬಿ ಕ್ಲಾಸ್ ಕಾರುಗಳಿಗೂ ಬೇಡಿಕೆ ಏರಿಕೆ ಕಾಣುತ್ತಿದೆ. ಇಲ್ಲೇ ಕಾರುಗಳನ್ನು ಉತ್ಪಾದಿಸಿದರೆ ವೆಚ್ಚ ಕಡಿತವೂ ಆಗುತ್ತದೆ" ಎಂದು ಅವರು ಹೇಳಿದ್ದಾರೆ.
ಈಗಾಗಲೇ ಕಂಪನಿಯು ದೇಶದಲ್ಲಿ ಸಿ, ಇ ಮತ್ತು ಎಸ್ ಕ್ಲಾಸ್ ಕಾರುಗಳನ್ನು ಉತ್ಪಾದಿಸುತ್ತಿದೆ. ಸುಮಾರು 55 ಲಕ್ಷ ರು.ನ ಎಂಎಲ್ 350 ಸಿಡಿಐ ಕಾರುಗಳು ಈಗಾಗಲೇ 327 ಯೂನಿಟ್ ಮಾರಾಟವಾಗಿವೆ. ಇದರೊಂದಿಗೆ ಕಂಪನಿಯು ಶೀಘ್ರದಲ್ಲಿ ಸಣ್ಣ ಸ್ಮಾರ್ಟ್ ಕಾರೊಂದನ್ನು ಕೂಡ ದೇಶದ ರಸ್ತೆಗೆ ಪರಿಚಯಿಸಲು ಯೋಜಿಸಿದೆ.
ಕಂಪನಿಯು ಹೆಚ್ಚು ಹೆಚ್ಚು ಇಲ್ಲೇ ವಾಹನಗಳನ್ನು ಉತ್ಪಾದಿಸಿದರೆ ಬೆಂಝ್ ಕಾರುಗಳ ದರ ಕೂಡ ಇಳಿಕೆ ಕಾಣಲಿದೆ. ಆಮದು ಸುಂಕ, ಆಮದು ವೆಚ್ಚಗಳೂ ಕಡಿಮೆಯಾಗುವುದರಿಂದ ಬೆಂಝ್ ದರ ಕಡಿಮೆಯಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.


Click it and Unblock the Notifications








