ಮರ್ಸಿಡಿಸ್ ದಾಖಲೆಯನ್ನು ಮುರಿದ ಮರ್ಸಿಡಿಸ್

ಒಂದೇ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ್ದು ನಿಜಕ್ಕೂ ದಾಖಲೆಯ ವಿಷಯ. ದೆಹಲಿ ಮೂಲದ Carzonrent ಕಂಪನಿಯು ಒಟ್ಟು 160 ಮರ್ಸಿಡಿಸ್ ಬೆಂಝ್ ಕಾರುಗಳನ್ನು ಹೊಂದಿದೆ.
ಇದ್ಯಾವ ಕಂಪನಿ? ಇದಕ್ಯಾಕೆ ಐಷಾರಾಮಿ ಕಾರು ಮೋಹ? ಎಂದು ಕೇಳದಿರಿ. ಕಾರ್ಜೊರೆಂಟ್ ಪ್ರೈವೆಟ್ ಲಿಮಿಟೆಡ್ ಐಷಾರಾಮಿ ಸಾರಿಗೆ ಸೇವೆಯಲ್ಲಿ ದೇಶದ ನಂಬರ್ ಒನ್ ಕಂಪನಿ. ಈ ಕಂಪನಿಯು ತಾತ್ಕಾಲಿಕ ಅವಧಿಗೆ ಎಲ್ಲಾ ಬಗೆಯ ಕಾರುಗಳನ್ನು ಬಾಡಿಗೆ ನೀಡುತ್ತಿದೆ.
ಈ ಕಂಪನಿಯು ಐದು ಸಾವಿರ ಕಾರುಗಳನ್ನು ಹೊಂದಿದೆ. ಇದರಲ್ಲಿ ಹೆಚ್ಚಿನ ಕಾರುಗಳು ಐಷಾರಾಮಿ ಕಾರುಗಳೆಂದು ಮರೆಯುವಂತ್ತಿಲ್ಲ. ನೂತನವಾಗಿ ಖರೀದಿಸಿದ 90 ಕಾರುಗಳನ್ನು ಉದ್ಯಮಿಗಳಿಗೆ ಬಾಡಿಗೆ ನೀಡಲಾಗುವುದಂತೆ.


Click it and Unblock the Notifications








