ಟೊಯೊಟಾ ಕಾರಿನಲ್ಲಿ ಬಟ್ಟೆ ಒಗೀರಿ, ದೋಸೆ ಮಾಡಿ

ಇದ್ಯಾವ ಬಗೆಯ ಕಾರೆಂದು ತಲೆಕೆಡಿಸಿಕೊಳ್ಳಬೇಡಿ. ಅದರ ಏರ್ ಕಂಡಿಷನ್ ಪವರ್ ಪಾಯಿಂಟ್ ಬಳಿಯಲ್ಲಿ ಹೆಚ್ಚುವರಿ ಕರೆಂಟ್ ಪ್ಲಗ್ ಜೋಡಿಸಲಾಗಿದೆ. ಇಲ್ಲಿ ನಿಮ್ಮ ಮನೆಬಳಕೆಯ ಎಲೆಕ್ಟ್ರಾನಿಕ್ ಸಾಧನಗಳನ್ನು ಕನೆಕ್ಟ್ ಮಾಡಬಹುದಾಗಿದೆ. ಹೌದು, ಕಾರಿನೊಳಗೆ ಬಟ್ಟೆಗೆ ಐರನ್ ಕೂಡ ಹಾಕಬಹುದಂತೆ!
ಜಪಾನಿನ ಕಾರು ತಯಾರಿಕಾ ಕಂಪನಿಯ ನೂತನ ಟೊಯೊಟಾ ಫ್ರಿಯೂಸ್ ಹೈಬ್ರಿಡ್ ಕಾರಿನಲ್ಲಿ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಜೋಡಿಸಲಾಗಿದೆ. ಇದರಿಂದ ನೀವು ಮನೆಯಲ್ಲಿ ಮಾಡುವ ಬಟ್ಟೆ ವಾಷಿಂಗ್, ಅಡುಗೆ ಕೆಲಸಗಳನ್ನು ಕಾರಿನಲ್ಲಿಯೇ ಮಾಡಬಹುದೆಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಜಪಾನಿನಲ್ಲಿ ಭೂಕಂಪ ಸಂಭವಿಸಿದ ನಂತರ ಇಂತಹ ಸೌಲಭ್ಯವನ್ನು ಕಾರಿನಲ್ಲಿ ಒದಗಿಸುವ ಕುರಿತು ಕಂಪನಿ ಆಲೋಚಿಸಿತ್ತಂತೆ. ಮಾರ್ಚ್ 11ರಂದು ಸಂಭವಿಸಿದ ಭೀಕರ ಸುನಾಮಿಗೆ ಜಪಾನ್ ಜನತೆ ಮನೆಮಠ ಕಳೆದುಕೊಂಡು ಪರದಾಡಿದ ಸ್ಥಿತಿ ಕಂಡು ಕಾರನ್ನೇ ಮೊಬೈಲ್ ಮನೆಯಾಗಿ ಮಾಡಲು ಕಂಪನಿ ನಿರ್ಧರಿಸಿತ್ತು. ಕಾರನ್ನು ಫುಲ್ ಚಾರ್ಜ್ ಮಾಡಿದರೆ ವಾಷಿಂಗ್ ಮೆಷಿನ್, ಸ್ಟವ್ ಉಪಯೋಗಿಸಿದರೂ ಎರಡು ದಿನಗಳ ಬ್ಯಾಟರಿ ಮುಗಿಯೋದಿಲ್ಲವೆಂದು ಕಂಪನಿ ಪ್ರತಿಪಾದಿಸಿದೆ.


Click it and Unblock the Notifications








