ಜಾಗ್ವಾರ್ ಎಕ್ಸ್ಎಫ್ ಕಾರು ಬೇಕೆ? 35 ಲಕ್ಷ ರುಪಾಯಿ

Jaguar XF 2.2 Diesel
ದೇಶದ ಘಟಕದಲ್ಲಿ ಜಾಗ್ವಾರ್ ಎಕ್ಸ್ಎಫ್ 2.2 ಡೀಸಲ್ ಕಾರಿನ ಜೋಡಣೆ ಶೀಘ್ರದಲ್ಲಿ ಆರಂಭವಾಗಲಿದೆ. ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಇದರ ದರವೆಷ್ಟಿರಬಹುದು ಎಂಬ ಕುತೂಹಳ ಎಲ್ಲರಲ್ಲಿತ್ತು. ಈ ಕಾರಿನ ದರವೀಗ ಬಹಿರಂಗಗೊಂಡಿದೆ. ನೂತನ ಜಾಗ್ವಾರ್ ಎಕ್ಸ್ಎಫ್ ಡೀಸಲ್ ಆವೃತ್ತಿಗೆ ಬರೋಬ್ಬರಿ 35 ಲಕ್ಷ ರುಪಾಯಿಯಂತೆ!

2.2 ಲೀಟರ್ ಡೀಸಲ್ ಎಂಜಿನ್ ಹೊಂದಿರುವ ಈ ಕಾರು ಈಗಾಗಲೇ ಭಾರತದಲ್ಲಿ ಜನಪ್ರಿಯಗೊಂಡಿದೆ. ಯಾಕೆಂದರೆ ಲ್ಯಾಂಡ್ ರೋವರಿನ ಫ್ರೀಲಾಂಡರ್ 2 ಕಾರಿನಲ್ಲೂ ಇದೇ ಎಂಜಿನ್ ಇದೆ. ದೇಶದ ರಸ್ತೆಗೆ ಮುಂದಿನ ದಿನಗಳಲ್ಲಿ ಟಾಟಾ ಮೋಟರ್ಸ್ ಇನ್ನಷ್ಟು ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳನ್ನು ಪರಿಚಯಿಸಲು ಯೋಜಿಸಿದೆ.

ಇದಕ್ಕೆ ಸದ್ಯ ರಸ್ತೆಯಲ್ಲಿ ಯಾವೆಲ್ಲ ಕಾರುಗಳು ಪೈಪೋಟಿ ನೀಡಲಿದೆ ಎಂಬುದನ್ನು ನೋಡೋಣ. ಬಿಎಂಡಬ್ಲ್ಯು ಈಗಾಗಲೇ ಬಿಎಂಡಬ್ಲ್ಯು 520ಡಿ ಕಾರುಗಳನ್ನು ಹೊರತಂದಿದೆ. ಎಫ್105 ಸೀರಿಸ್ ನಲ್ಲಿ ಇದು ಜನಪ್ರಿಯಗೊಂಡಿದೆ. 2 ಲೀಟರ್ ಎಂಜಿನ್ ನಲ್ಲಿ ಮರ್ಸಿಡಿಸ್ ಬೆಂಝ್ ಕೂಡ ಕಾರನ್ನು ಹೊರತರಲು ನಿರ್ಧರಿಸಿದೆ.

ನೂತನ ಜಾಗ್ವಾರ್ ಎಕ್ಸ್ಎಫ್ ಡೀಸಲ್ ಕಾರು ಮುಂದಿನ ವರ್ಷದ ಆರಂಭದಲ್ಲಿ ದೇಶದ ರಸ್ತೆಗಿಳಿಯಲಿದೆ. ಈ ಕಾರು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ. ಐಷಾರಾಮಿ ಕಾರುಗಳಲ್ಲಿ ದಾಖಲೆಯ ಮೈಲೇಜ್ ಹೊಂದಿರುವುದು ಈ ಕಾರಿನ ವಿಶೇಷ. ನಂಬಿದರೆ ನಂಬಿ ಈ ಕಾರು ಪ್ರತಿಲೀಟರ್ ಡೀಸಲ್ ಗೆ 19 ಕಿ.ಮೀ. ಮೈಲೇಜ್ ನೀಡುತ್ತದಂತೆ!

Article Published On: Friday, July 22, 2011, 11:35 [IST]
English summary
Jaguar XF 2.2 Diesel Price in India. Jaguar XF 2.2 Diesel Expected to bow in early next year at the upcoming 2012 Indian Auto Expo. Price expected INR 35 Lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+