ದರ ಹೆಚ್ಚಳ ಮಾಡದಿರಲು ಮಾರುತಿ ಸುಜುಕಿ ನಿರ್ಧಾರ

Maruti Suzuki Alto
ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ, ಶೀಘ್ರದಲ್ಲಿ ಯಾವುದೇ ರೀತಿಯ ದರ ಹೆಚ್ಚಳ ಮಾಡವುದಿಲ್ಲ ಎಂದಿದೆ. ಸದ್ಯದ ಕಾರು ಮಾರುಕಟ್ಟೆ ಸ್ಥಿತಿಗತಿ ದರ ಹೆಚ್ಚಳಕ್ಕೆ ಪೂರಕವಾಗಿಲ್ಲವೆಂದು ಕಂಪನಿಯ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಶಶಾಂಕ್ ಶ್ರೀವತ್ಸಾ ಅಭಿಪ್ರಾಯಪಟ್ಟಿದ್ದಾರೆ.

"ಈಗ ಕಾರು ಮಾರಾಟ ಇಳಿಕೆ ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದರ ಹೆಚ್ಚಿಸಿದರೆ ಮಾರಾಟಕ್ಕೆ ಇನ್ನಷ್ಟು ಹೊಡೆತವಾಗಲಿದೆ. ಜೊತೆಗೆ ಕಮಾಡಿಟಿ ದರಗಳೂ ಕೆಲವು ತಿಂಗಳಿಂದ ಸದೃಢವಾಗಿದೆ. ಹೀಗಾಗಿ ದರ ಹೆಚ್ಚಳ ಮಾಡುವ ಅನಿವಾರ್ಯತೆಯೂ ಸದ್ಯಕ್ಕೆ ಕಾಣುತ್ತಿಲ್ಲ" ಎಂದು ಶಶಾಂಕ್ ಶ್ರೀವತ್ಸಾ ಹೇಳಿದ್ದಾರೆ.

ಕಂಪನಿಯು ಆಗಸ್ಟ್ ತಿಂಗಳಲ್ಲಿ ನೂತನ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಹೊರತರಲಿದೆ ಎಂದು ಶಶಾಂಕ್ ಮಾಹಿತಿ ನೀಡಿದ್ದಾರೆ. ಸದ್ಯ ನೂತನ ಕಾರನ್ನು ಗುರ್ ಗಾಂವ್ ಘಟಕದಲ್ಲಿ ಉತ್ಪಾದಿಸಲಾಗುವುದು. ಪ್ರತಿತಿಂಗಳು 12 ಸಾವಿರ ಯೂನಿಟಿಗಿಂತ ಹೆಚ್ಚು ಸ್ವಿಫ್ಟ್ ಕಾರುಗಳನ್ನು ಉತ್ಪಾದಿಸುವ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Friday, July 22, 2011, 12:04 [IST]
English summary
India's Leading car maker Maruti Suzuki will not be increasing car prices any time soon. Shashank Srivastava the Chief General Manager ( Marketing ) of Maruti Suzuki has said the current market conditions did not warrant an increase in car prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+