ಷೆವರ್ಲೆ ಬೀಟ್ ಡೀಸಲ್ ರಸ್ತೆಗೆ, ದರ 4.29 ಲಕ್ಷ ರು.

ಷೆವರ್ಲೆ ಬೀಟ್ ಡೀಸಲ್ PS ಮಾಡೆಲ್ ದರ 4.29 ಲಕ್ಷ ರು. ಇದೆ. ಉಳಿದಂತೆ ಬೀಟ್ ಡೀಸಲ್ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಎಲ್ಎಸ್, ಎಲ್ ಟಿ ಮತ್ತು ಎಲ್ ಟಿ ಎಬಿಎಸ್-ಅಲಾಯ್ ವೀಲ್ ಗಳಲ್ಲಿ ಈ ಕಾರುಗಳು ದೊರಕುತ್ತಿವೆ. ಈ ಮೂರು ಆವೃತ್ತಿಗಳ ದರ ಕ್ರಮವಾಗಿ 4.59 ಲಕ್ಷ ರು., 4.99 ಲಕ್ಷ ರು. ಮತ್ತು 5.45 ಲಕ್ಷ ರು. ಇದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರಗಳಾಗಿವೆ.
ನೂತನ ಷೆವರ್ಲೆ ಬೀಟ್ ಡೀಸಲ್ ಕಾರು 936 ಸಿಸಿಯ, ಟರ್ಬೊ ಚಾರ್ಜ್ ಡ್ ಕಾಮನ್ ರೈಲ್ ಡೀಸಲ್ ಎಂಜಿನ್ ಹೊಂದಿದೆ. ಇದು 57 ಹಾರ್ಸ್ ಪವರ್ ಮತ್ತು 150 ಪೀಕ್ ಟಾರ್ಕ್ ಪವರ್ ನೀಡುತ್ತದೆ. ಷೆವರ್ಲೆ ಬೀಟ್ ಡೀಸಲ್ 1.0 ಲೀಟರ್ ನ ಎಕ್ಸ್ಸಿಡಿಇ ಡೀಸಲ್ ಎಂಜಿನ್ ಹೊಂದಿದೆ.
ಈ ಕಾರು ನಗರಗಳಲ್ಲಿ ಪ್ರತಿಲೀಟರ್ ಡೀಸಲ್ ಗೆ 24 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸಲ್ ಬೀಟ್ 3 ವರ್ಷ/ 1 ಲಕ್ಷ ಕಿ.ಮೀ. ಎಂಜಿನ್ ವಾರೆಂಟಿ ಹೊಂದಿದೆ. ಜೊತೆಗೆ 3 ವರ್ಷ/45 ಸಾವಿರ ಕಿ.ಮೀ. ಮೆಂಟೈನ್ ಸೌಲಭ್ಯವನ್ನೂ ಕಂಪನಿ ನೀಡಿದೆ.


Click it and Unblock the Notifications








