ಆಡಿ ಎ8 ರಸ್ತೆಗೆ, ದರ 1.26 ಕೋಟಿ ರುಪಾಯಿ

Audi India launched New A8
ಮುಂಬೈ, ಜುಲೈ 26: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ "ಎ8"ನ ನೂತನ ಆವೃತ್ತಿಯೊಂದನ್ನು ಪರಿಚಯಿಸಿದೆ. ಇದರ ಎಕ್ಸ್ ಶೋರೂಂ ದರ ಸುಮಾರು 1,26,56,000 ರುಪಾಯಿ.

"ಲಕ್ಷುರಿ ಕಾರು ಮಾರುಕಟ್ಟೆಯಲ್ಲಿ ಆಡಿ ಎ8 ಎಲ್ ಶಕ್ತಿಶಾಲಿ ಎಂಜಿನ್ ನಿಂದ ಗ್ರಾಹಕರಿಗೆ ಇಷ್ಟವಾಗುವಂತ್ತಿದೆ" ಎಂದು ಆಡಿ ಇಂಡಿಯಾ ಮಖ್ಯಸ್ಥರು ಹೇಳಿದ್ದಾರೆ. ಕಂಪನಿಯು ಮೊದಲ ಬ್ಯಾಚಿನಲ್ಲಿ 20 ಕಾರುಗಳನ್ನು ಹೊರತಂದಿದೆ. ಒಂದು ಮೂಲದ ಪ್ರಕಾರ ಈ 20 ಕಾರುಗಳೂ ಬುಕ್ಕಿಂಗ್ ಆಗಿಯಾಗಿದೆ.

ನೂತನ ಕಾರು 6.3 ಎಫ್ಎಸ್ಐ ಎಂಜಿನ್ ಹೊಂದಿದ್ದು 500 ಅಶ್ವಶಕ್ತಿ ನೀಡುತ್ತದೆ. "ಸ್ಪೋರ್ಟ್ಸ್ ಕಾರಿನಲ್ಲಿರಬೇಕಾದ ಕಾರ್ಯಕ್ಷಮತೆ ನೂತನ ಆಡಿ ಎ8 ಎಲ್ ಡಬ್ಲ್ಯು12 ಕ್ಯೂಟ್ರೊ ಕಾರಿನಲ್ಲಿದೆ" ಎಂದು ಕಂಪನಿ ಪ್ರಕಟಣೆ ಹೇಳಿದೆ. ಕೇವಲ 4.7 ಸೆಕೆಂಡಿನಲ್ಲಿ ಸೊನ್ನೆಯಿಂದ 100 ಕಿ.ಮೀ.ಗೆ ವೇಗ ಪಡೆದುಕೊಳ್ಳಬಹುದಾಗಿದೆ. ಈ ಕಾರು 8 ಸ್ಪೀಡ್ ಟಿಪ್ಟ್ರೊನಿಕ್ ಶಿಫ್ಟ್ ಗೇರ್ ಹೊಂದಿದೆ.

ನೂತನ ಸ್ಪೋರ್ಟಿ ಬ್ಯೂಟಿಯಲ್ಲಿ ಐಷಾರಾಮಿ ಮತ್ತು ಸುರಕ್ಷತೆಯ ಫೀಚರ್ ಗಳು ಬೇಕಾದಷ್ಟಿವೆ. ಎದುರು ಮತ್ತು ಹಿಂದಿನ ಸೀಟನ್ನು ಆಟೋಮ್ಯಾಟಿಕ್ ಆಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಸನ್ ರೂಫ್, ಎರಡು ಮಾನಿಟರ್ ಪರದೆ ಕಾರಿನೊಳಗಿದೆ.

ಸದ್ಯ ದೇಶದ ರಸ್ತೆಯಲ್ಲಿ ಕಂಪನಿಯ ಎ4, ಎ6, ಎ8 ಮತ್ತು ಎ7 ಮುಂತಾದ ಸ್ಪೋರ್ಟ್ಸ್ ಕಾರುಗಳಿವೆ. ಉಳಿದಂತೆ ಕ್ಯೂ5, ಕ್ಯೂ7 ಮತ್ತು ಆರ್ಎಸ್5 ಕಾರುಗಳಿವೆ. ಇಷ್ಟೇ ಅಲ್ಲದೇ ಆರ್8, ಆರ್8 ಸ್ಪೈಡರ್ ಎಂಬ ಸೂಪರ್ ಸ್ಪೋರ್ಟ್ಸ್ ಕಾರುಗಳಿವೆ.

Article Published On: Tuesday, July 26, 2011, 11:11 [IST]
English summary
Audi India launched a new variant of its A8 sedan priced at Rs. 12,656,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+