ಆಗಸ್ಟ್ ಹದಿನೇಳಕ್ಕೆ ಜೆಟ್ಟಾ ಬರುತ್ತಾನಂತೆ!

ಹಳೆಯ ಜೆಟ್ಟಾ ಕಾರಿಗೆ ಹೋಲಿಸಿದರೆ ನೂತನ ಜೆಟ್ಟಾದಲ್ಲಿ ಸಾಕಷ್ಟು ಬದಲಾವಣೆಯೊಂದಿಗೆ ಬಂದಿದೆ. ಇದರ ವೀಲ್ ಬೇಸ್ ಹಳೆಯ ಕಾರಿಗಿಂತ 70mm ವಿಸ್ತಾರವಾಗಿದೆ. ಇದರಿಂದಾಗಿ ಕಾರಿನ ಲಗೇಜ್ ರೂಂ ಸ್ಥಳಾವಕಾಶ ಹೆಚ್ಚಾಗಿದೆ. ಒಂದಿಷ್ಟು ಹೊಸ ಫೀಚರ್ ಗಳೂ ನೂತನ ಕಾರಿನಲ್ಲಿ ಅಡಕವಾಗಿದೆ.
ಎಂಜಿನ್ ಸಾಮರ್ಥ್ಯವೂ ಹೆಚ್ಚಾಗಿದೆ. ನೂತನ ಜೆಟ್ಟಾ 2.0 ಲೀಟರ್ ನಾಲ್ಕು ಸಿಲಿಂಡರಿನ ಡೀಸಲ್ ಎಂಜಿನ್ ಮತ್ತು 1.4 ಲೀಟರಿನ ಪೆಟ್ರೊಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಇವೆರಡೂ ಆವೃತ್ತಿಗಳು 6 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿವೆ. ದರ ಸುಮಾರು 16 ಲಕ್ಷ ರು.ನಿಂದ 18 ಲಕ್ಷ ರು.ವರೆಗಿರಲಿದೆ.


Click it and Unblock the Notifications