ಮಾರುತಿ ಜುಲೈ ಮಾರಾಟ ಶೇಕಡ 25ರಷ್ಟು ಇಳಿಕೆ

ಇದರೊಂದಿಗೆ ಸ್ವಿಫ್ಟ್ ಉತ್ಪಾದನೆ ಸ್ಥಗಿತಗೊಳಿಸಿರುವುದು ಮಾರಾಟದ ಮೇಲೆ ಪರಿಣಾಮ ಬೀರಿದೆ. ಹಳೆಯ ಸ್ವಿಫ್ಟ್ ಉತ್ಪಾದನೆ ಸ್ಥಗಿತವಾದ ಹಿನ್ನಲೆಯಲ್ಲಿ ಹೆಚ್ಚಿನ ಗ್ರಾಹಕರು ಸ್ವಿಫ್ಟ್ ಖರೀದಿಯಿಂದ ಹಿಂದೆ ಸರಿದಿದ್ದರು. ಮತ್ತು ಹೊಸ ಸ್ವಿಫ್ಟ್ ನಿರೀಕ್ಷೆಯಲ್ಲಿದ್ದಾರೆ.
ಕಂಪನಿಯು ಜುಲೈ ತಿಂಗಳಲ್ಲಿ ಕೇವಲ 5,471 ಸ್ವಿಫ್ಟ್ ಡಿಜೈರ್ ಕಾರುಗಳನ್ನು ಉತ್ಪಾದಿಸಿತ್ತು. ಕಂಪನಿಯು ದೇಶಿ ಮಾರುಕಟ್ಟೆಯಲ್ಲಿ 66,504 ಕಾರುಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷದ ಜುಲೈ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 26.20ರಷ್ಟು ಕಡಿಮೆಯಾಗಿದೆ. ಕಂಪನಿಯು 10,746 ಕಾರುಗಳನ್ನು ರಫ್ತು ಮಾಡಿದೆ.
ಮಾರುತಿ 800, ಆಲ್ಟೊ, ಎಸ್ಟಾರ್, ವ್ಯಾಗನಾರ್, ಸ್ವಿಫ್ಟ್, ರಿಟ್ಜ್ ಮತ್ತು ಎಸ್ಟಿಲೋ ಮಾರಾಟ ಗಣನೀಯವಾಗಿ ಇಳಿಕೆ ಕಂಡಿದೆ. ಆದರೆ ಮಾರಾಟ ಇಳಿಕೆಯ ಸಂಕಷ್ಟದ ಕಾಲದಲ್ಲಿ ಮಾರುತಿ ಎಸ್ಎಕ್ಸ್4 ಸೆಡಾನ್ ಕಾರು ಮಾತ್ರ ತುಸು ಏರಿಕೆ ದಾಖಲಿಸಿದೆ. ಇದರೊಂದಿಗೆ ಕಂಪನಿಯು 35 ಲಕ್ಷುರಿ ಕಿಝಾಷಿ ಕಾರುಗಳನ್ನು ಮಾರಾಟ ಮಾಡಿದೆ.


Click it and Unblock the Notifications








