ಜುಲೈನಲ್ಲಿ ಸ್ಕೋಡಾ ಮಾರಾಟ ಶೇ. 98ರಷ್ಟು ಏರಿಕೆ

ಜುಲೈ ತಿಂಗಳ ಮಾರಾಟ ಪ್ರಗತಿಯಿಂದ ಕಂಪನಿ ಸಕತ್ ಖುಷಿಗೊಂಡಿದೆ. ಕಂಪನಿಯು ಭವಿಷ್ಯದಲ್ಲಿ ದೇಶದ ರಸ್ತೆಗೆ ಎರಡು ಕಾರುಗಳನ್ನು ಹೊರತರಲಿದೆ. ಇವೆರಡು ಕಾರುಗಳು ಈ ವರ್ಷದಲ್ಲಿಯೇ ರಸ್ತೆಗಿಳಿಯಲಿದೆ. ಅದರಲ್ಲಿ ಎಂಟ್ರಿ ಲೆವೆಲ್ ಸೆಡಾನ್ ಕಾರೊಂದಿದೆ. ಮತ್ತೊಂದು ಬಹುನಿರೀಕ್ಷಿತ ಸ್ಕೋಡಾ ಲಾರಾ ಕಾರು ಕೂಡ ಈ ವರ್ಷವೇ ರಸ್ತೆಗಿಳಿಯಲಿದೆಯಂತೆ!
"ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲೂ ಕಂಪನಿಯ ಮಾರಾಟ ಆರೋಗ್ಯಕರ ಪ್ರಗತಿ ಕಂಡಿದೆ. ಗುಣಮಟ್ಟ ಮತ್ತು ಅತ್ಯುನ್ನತ ತಂತ್ರಜ್ಞಾನದ ನೆರವಿನಿಂದ ಕಂಪನಿಯು ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು ಡೀಲರ್ಷಿಪ್ ನೆಟ್ ವರ್ಕ್ ಹೆಚ್ಚಿಸಲು ಕೂಡ ನಿರ್ಧರಿಸಿದೆ" ಎಂದು ಕಂಪನಿಯ ಆಡಳಿತ ಮಂಡಳಿಯ ಸದಸ್ಯರಾದ ಥೋಮಸ್ ಕ್ಯೊಯೆಲ್ ಹೇಳಿದ್ದಾರೆ.


Click it and Unblock the Notifications








