ನಿಸ್ಸಾನ್ ಸನ್ನಿ ಕಾರು ಬೇಕಾದವರೆಲ್ಲ ಬನ್ನಿ

Nissan Sunny India
ನಿಸ್ಸಾನ್ ಕಂಪನಿಯ ಸನ್ನಿ ಕಾರೊಂದನ್ನು ಖರೀದಿಸಬೇಕೆಂದವರಿಗೆ ಖರೀದಿ ಸಮಯ ಸನ್ನಿಹಿತವಾಗಿದೆ. ಶೀಘ್ರದಲ್ಲಿ ನೂತನ ನಿಸ್ಸಾನ್ ಸನ್ನಿ ಸೆಡಾನ್ ಕಾರು ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ. ಇದು ನಿಸ್ಸಾನ್ ಮೈಕ್ರಾ ಸಣ್ಣ ಕಾರಿನ ಸೆಡಾನ್ ಆವೃತ್ತಿಯಾಗಿದೆ.

ನಿಸ್ಸಾನ್ ಸನ್ನಿ ಕಾರು ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ನೂತನ ಕಾರು ದೇಶದ ರಸ್ತೆಯಲ್ಲಿರುವ ಎ3 ಸೆಗ್ಮೆಂಟ್ ಜೊತೆ ಸೇರಲಿದೆ. ಅಂದ್ರೆ ಫೋಕ್ಸ್ ವ್ಯಾಗನ್ ವೆಂಟೊ, ಮಹೀಂದ್ರ ವೆರಿಟೊ, ಮಾರುತಿ ಸುಜುಕಿ ಎಸ್ಎಕ್ಸ್4, ಹ್ಯುಂಡೈ ವೆರ್ನಾ, ಫಿಯೆಟ್ ಲಿನಿಯಾ ಮತ್ತು ಹೋಂಡಾ ಸಿಟಿಯೊಂದಿಗೆ ಸ್ಪರ್ಧಿಸಲಿದೆ.

ನೂತನ ನಿಸ್ಸಾನ್ ಸೆಡಾನ್ ದರ ಸುಮಾರು 7.25 ಲಕ್ಷ ರು. ಇರುವ ನಿರೀಕ್ಷೆಯಿದೆ. ಇದು ದೇಶದ ರಸ್ತೆಗೆ ಕಂಪನಿ ಮೊದಲ ಮಧ್ಯಮ ಗಾತ್ರದ ಕಾರಾಗಿದೆ. ಕಂಪನಿಯು ಸದ್ಯ ದೇಶದಲ್ಲಿ ಸಣ್ಣ ಕಾರು ನಿಸ್ಸಾನ್ ಮೈಕ್ತಾ ಮತ್ತು ಐಷಾರಾಮಿ ಸೆಡಾನ್ ಕಾರು ಟಿನಾ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇವೆರಡು ಕಾರುಗಳ ನಡುವೆ ನೂತನ ಸನ್ನಿ ಬಂದು ಕುಳಿತುಕೊಳ್ಳಲಿದೆ.

ನೂತನ ಕಾರನ್ನು ಕಂಪನಿಯು ಚೆನ್ನೈ ಘಟಕದಲ್ಲಿ ಉತ್ಪಾದಿಸಲಿದೆ. ಸನ್ನಿ ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕಲಿದೆ. ಇವೆರಡು ಕಾರುಗಳು ಕ್ರಮವಾಗಿ 110 ಮತ್ತು 85 ಹಾರ್ಸ್ ಪವರ್ ನೀಡಲಿದೆ.

More from DriveSpark

Article Published On: Wednesday, August 3, 2011, 15:27 [IST]
English summary
Nissan is expected to launch a new sedan in the Indian market tomorrow. The Nissan Sedan is expected to be priced about Rs.7.25 lakhs. Nissan's new sedan will be the latest model to join the list of A3 segment sedans such as the Volkswagen Vento, Mahindra Verito, Maruti Suzuki SX4, Hyundai Verna, Fiat Linea and the Honda City.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+