ಹೆಚ್ಚು ಕದಿಯಲ್ಪಟ ಟಾಪ್ ಟೆನ್ ಕಾರುಗಳ ಪಟ್ಟಿ

Most stolen vehicle list
ಅದು ಜಾಗತಿಕ ಆರ್ಥಿಕ ಹಿಂಜರಿತರ ಕಾಲ. ಹೆಚ್ಚಿನವರು ಉದ್ಯೋಗ ಕಳೆದುಕೊಂಡಿದ್ದರು. ದುಡ್ಡಿನ ಅಭಾವ ಹೆಚ್ಚಾಗಿತ್ತು. ಕಳ್ಳರ ಸಂಖ್ಯೆಯೂ ಹೆಚ್ಚಾಗಿತ್ತು. ಎಲ್ಲೋ ನಿಲ್ಲಿಸಿದ ಕಾರುಗಳನ್ನು ಕಳ್ಳರು ಕದ್ದು ಮಾರಾಟ ಮಾಡುತ್ತಿದ್ದರು.

ಕಳ್ಳರು ಹೊಸ ಕಾರನ್ನೇ ಕದಿಯುತ್ತಾರೆ ಎಂದು ಭಾವಿಸಬೇಡಿ. ಕಳೆದ ವರ್ಷ ಹೆಚ್ಚು ಕಳ್ಳತನವಾದ ಕಾರುಗಳ ಪಟ್ಟಿಯನ್ನು ಅಮೆರಿಕದ ರಾಷ್ಟ್ರೀಯ ವಿಮಾ ಅಪರಾಧ ಸಂಸ್ಥೆ ಪ್ರಕಟಿಸಿದೆ. ಅದರಲ್ಲಿ ಹೆಚ್ಚು ಕಳ್ಳತನವಾದದ್ದು ಹಳೆಯ ಕಾರುಗಳೇ.

ಟಾಪ್ ಟೆನ್ ಕಳ್ಳತನವಾದ ಕಾರುಗಳ ಪಟ್ಟಿಯಲ್ಲಿ 1991ರ ಹೋಂಡಾ ಅಕಾರ್ಡ್ ಕಾರು ಹೆಚ್ಚು ಕದಿಯಲ್ಪಟ್ಟಿತ್ತು. ನಂಬಿದರೆ ನಂಬಿ. ಒಂದು ವರ್ಷದಲ್ಲಿ ಅಮೆರಿಕದಲ್ಲಿ 52 ಸಾವಿರ ಹೋಂಡಾ ಅಕಾರ್ಡ್ ಕಾರು ಕಳ್ಳತನವಾಗಿದೆ. ಅದರಲ್ಲಿ 44 ಸಾವಿರದಷ್ಟು ಹಳೆಯ ಅಕಾರ್ಡ್ ಕಾರುಗಳಾಗಿವೆ.

1995ರ ಹೋಂಡಾ ಸಿವಿಕ್ ಕಾರು ಕೂಡ ಹೆಚ್ಚು ಕಳ್ಳತನವಾಗಿದೆ. ಹಳೆಯ ಕಾರು ಮಾರಾಟ ಮಾಡಲು ಸುಲಭವಾಗಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ನಿಮ್ಮ ಹಳೆಯ ಕಾರಿನ ಮೇಲೂ ನಿಗಾ ಇರಲಿ. ಇದು ಕಳ್ಳತನವಾದ ಟಾಪ್ ಟೆನ್ ಅಮೆರಿಕ ಕಾರುಗಳ ಪಟ್ಟಿ.

ಹೆಚ್ಚು ಕಳ್ಳತನವಾದ ಟಾಪ್ ಟೆನ್ ಕಾರುಗಳು
* 1994ರ ಹೋಂಡಾ ಅಕಾರ್ಡ್
* 1995ರ ಹೋಂಡಾ ಸಿವಿಕ್
* 1991ರ ಟೊಯೊಟಾ ಕ್ಯಾಮ್ರಿ
* 1999ರ ಷೆವರ್ಲೆ ಪಿಕಪ್
* 1997ರ ಫೋರ್ಡ್ ಎಫ್150 ಸೀರಿಸ್/ಪಿಕಪ್
* 2004ರ ದೊಡ್ಜ್ ರೇಮ್
* 2000ರ ದೊಡ್ಜ್ ಕಾರಾವನ್
* 1994ರ ಅಕ್ಯೂರಾ ಇಂಟಿಗ್ರಾ
* 2002ರ ಫೋರ್ಡ್ ಎಕ್ಸ್ ಪ್ಲೊರರ್
* 1999ರ ಫೋರ್ಡ್ ತರಾಸ್

More from DriveSpark

Article Published On: Thursday, August 4, 2011, 16:46 [IST]
English summary
According to a report from the National Insurance Crime Bureau (NICB), almost 52,000 Honda Accords were stolen in 2010, and over 44,000 were models made in the 1990s.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+