ನಿಸ್ಸಾನ್ ಸನ್ನಿ ಅನಾವರಣ, ಹಾಯ್ ಹೇಳೋಣ ಬನ್ನಿ

ಸನ್ನಿ ಎಂಬುದು ಜಪಾನ್ ಕಂಪನಿ ಐಕಾನಿಕ್ ಹೆಸರು. ಕಂಪನಿಯು 1966ರಲ್ಲಿ ಅಂದರೆ 45 ವರ್ಷಗಳ ಹಿಂದೆಯೇ ಸನ್ನಿ ಕಾರೊಂದನ್ನು ಪರಿಚಯಿಸಿತ್ತು. ನೂತನ ತಲೆಮಾರಿಗೆ ಸೂಕ್ತವಾದ ಸನ್ನಿ ಕಾರು ಹಲವು ವಿಶೇಷತೆ ಮತ್ತು ತಂತ್ರಜ್ಞಾನಗಳನ್ನು ಹೊಂದಿದೆ. ಕಂಪನಿಯು ಅಮೆರಿಕ, ಚೀನಾ ಮತ್ತು ಭಾರತದ ಮಾರುಕಟ್ಟೆಗಳಲ್ಲಿ ನೂತನ ಕಾರಿನ ಮಾರುಕಟ್ಟೆಯನ್ನು ಹೆಚ್ಚಿಸಲು ಕಾರ್ಯತಂತ್ರ ರೂಪಿಸಿದೆ.
"ಕಂಪನಿಯು ದೇಶದಲ್ಲಿ ಹಲವು ಕಾರುಗಳನ್ನು ಹೊರತರಲು ನಿರ್ಧರಿಸಿದೆ. ಇದೀಗ ನಿಸ್ಸಾನ್ ಸನ್ನಿಯನ್ನು ಅನಾವರಣ ಮಾಡಿದ್ದೇವೆ. ವಿ ಫ್ಲಾಟ್ ಫಾರ್ಮ್ ನಲ್ಲಿ ಬಂದಿರುವ ನೂತನ ಕಾರುಗಳಿಗೆ ಇಲ್ಲಿನ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ಕಾಣುವ ನಿರೀಕ್ಷೆಯಿದೆ" ಎಂದು ನಿಸ್ಸಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಿಮಿನೊಡೊ ಟೊಕುಯಮಾ ಹೇಳಿದ್ದಾರೆ.


Click it and Unblock the Notifications








