2-4 ಲಕ್ಷ ರು. ಸಣ್ಣ ಕಾರು ಹೊರತರಲು ನಿಸ್ಸಾನ್ ಯೋಜನೆ

ಕಂಪನಿ ಹೊರತರಲಿರುವ ನೂತನ ಸಣ್ಣ ಕಾರು ಮಾರುತಿ ಆಲ್ಟೊ, ಷೆವರ್ಲೆ ಸ್ಪಾರ್ಕ್ ಮತ್ತು ಹ್ಯುಂಡೈ ಸ್ಯಾಂಟ್ರೊಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.
"ನಾವು ಮೈಕ್ರಾಕ್ಕಿಂತ ಅಗ್ಗದ ಸಣ್ಣ ಕಾರೊಂದನ್ನು ಹೊರತರುವ ಕುರಿತು ಗಂಭೀರವಾಗಿ ಆಲೋಚಿಸುತ್ತಿದ್ದೇವೆ. ನಮಗೆ ಸಣ್ಣ ಕಾರು ಸೆಗ್ಮೆಂಟಿನಲ್ಲಿ ಅತ್ಯುತ್ತಮ ಅವಕಾಶಗಳಿವೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಕಿಮಿನೊಡು ತೊಕುಯಮಾ ಹೇಳಿದ್ದಾರೆ.
ಇದರ ಹೊರತಾಗಿ ನ್ಯಾನೊ ಈಗಾಗಲೇ ಮಲ್ಟಿ ಪರ್ಪೊಸ್ ವೆಹಿಕಲ್ ಹೊರತರುವ ಕುರಿತು ಕೂಡ ಯೋಚಿಸುತ್ತಿದೆ. ಇದಕ್ಕಾಗಿ ಅಶೋಕ್ ಲೇಲ್ಯಾಂಡ್ ಜೊತೆಗೆ ಜಂಟಿ ಉದ್ಯಮ ನಿರ್ಮಿಸುತ್ತಿದೆ. ಈ ಕಾರು ಮುಂದಿನ ವರ್ಷ ರಸ್ತೆಗಿಳಿಯಲಿದ್ದು ಟೊಯೊಟಾ ಇನ್ನೋವಾದಂತಹ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








