ಹಳೆಯ ಕಾರುಗಳನ್ನು ರಿಸೈಕಲ್ ಮಾಡಲೊಂದು ಘಟಕ

http://upload.wikimedia.org/wikipedia/commons/2/22/Old_car_in_Maracaibo.JPG
ಇನ್ನು ಇದನ್ನು ಬಳಸಲಾಗದು ಎಂಬ ಹಂತಕ್ಕೆ ಬಂದ ಕಾರುಗಳನ್ನು ಏನು ಮಾಡಬಹುದು? ಗುಜರಿಗೆ ಮಾರಿಬಿಡಬಹುದು. ಇಲ್ಲವಾದರೆ ಗ್ಯಾರೇಜ್ ಹೊರಗಡೆ ನಿಲ್ಲಿಸಬಹುದು. ಹೀಗೆ ದೇಶದಲ್ಲಿ ಹೆಚ್ಚಿನ ಹಳೆಯ ಕಾರುಗಳು ತುಕ್ಕು ಹಿಡಿದು ಮೂಲೆ ಸೇರುತ್ತವೆ.

ಆದರೆ ಹಳೆಯ ಕಾರುಗಳಲ್ಲಿರುವ ಲೋಹ, ಪ್ಲಾಸ್ಟಿಕ್, ಅಲ್ಯುಮಿನಿಯಂ ಇತ್ಯಾದಿಗಳನ್ನು ಸಂಸ್ಕರಿಸಿ ಮರುಬಳಕೆ ಮಾಡಬಹುದು. ಹಳೆಯ ಕಾರನ್ನು ರಿಸೈಕಲ್ ಮಾಡುವ ನೂತನ ಘಟಕ ಚೆನ್ನೈನಲ್ಲಿ ಆರಂಭವಾಗಿದೆ ಎಂದು ದೇಶದ ವಾಹನ ತಯಾರಿಕರ ಒಕ್ಕೂಟ(ಎಸ್ಐಎಎಂ) ಹೇಳಿದೆ. ಈ ಘಟಕ ಆಗಸ್ಟ್ 2ರಂದು ಆರಂಭವಾಗಿದೆ.

ಹಳೆಯ ಕಾರುಗಳನ್ನು ಸಂಸ್ಕರಿಸಿ ಅದರಲ್ಲಿರುವ ಕಚ್ಚಾ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಇದು ವಾಹನೋದ್ಯಮದ ಪ್ರಗತಿಗೆ ನೆರವಾಗಲಿದೆ ಎಂದು ಎಸ್ಐಎಎಂ ಹೇಳಿದೆ. ಈ ಘಟಕವನ್ನು ಗ್ಲೋಬಲ್ ಆಟೋಮೊಟಿವ್ ರಿಸರ್ಚ್ ನೆರವಿನಿಂದ ಭಾರಿ ಉದ್ಯಮಗಳ ಸಚಿವಾಲಯವು ನಿರ್ಮಿಸಿದೆ. ಈ ಘಟಕ ಚೆನ್ನೈನ ಒರಗದಾಮ್ ನಲ್ಲಿದೆ.

"ಈ ಘಟಕದಲ್ಲಿ ಹಳೆಯ ಕಾರುಗಳನ್ನು ರಿಸೈಕಲಿಂಗ್ ಮಾಡುವುದರಿಂದ ವಾಹನ ಕ್ಷೇತ್ರ ಪ್ರಗತಿ ಕಾಣಲಿದೆ. 2020ರ ವೇಳೆಗೆ ಈ ಘಟಕದಿಂದ 15 ಲಕ್ಷ ಟನ್ ಸ್ಟ್ರೀಲ್ ಸ್ಕ್ರಾಪ್, 1,80,000 ಟನ್ ಅಲ್ಯುಮಿನಿಯಂ ಸ್ಕ್ರಾಪ್ ಮತ್ತು 75 ಸಾವಿರ ಬಳಕೆಗೆ ಯೋಗ್ಯವಾದ ಪ್ಲಾಸ್ಟಿಕ್ ಮತ್ತು ರಬ್ಬರ್ ಸ್ಕ್ರಾಪ್ ಗಳನ್ನು ಪಡೆಯುವ ನಿರೀಕ್ಷೆಯಿದೆ" ಎಂದು ಎಸ್ಎಐಎಂ ಹೇಳಿದೆ.

More from DriveSpark

Article Published On: Friday, August 5, 2011, 10:19 [IST]
English summary
Recycling facility for used cars was launched in Tamil Nadu, the Society of Indian Automobile Manufacturers (SIAM) said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+