ಇಂದಿಗೂ ಬೇಡಿಕೆ ಕಾಪಾಡಿಕೊಂಡಿರುವ 9 ಹಳೆಯ ಗಾಡಿಗಳು!
ಕಾರು, ಬೈಕ್ ಗಳೀಗ ಗ್ಯಾಡ್ಜೆಟ್ ಗಳಿಗೆ ಸಮಾನವಾಗಿ ಬಿಟ್ಟಿದೆ. ಶೋ ರೂಂನಿಂದ ರಸ್ತೆಗಿಳಿದ ಒಂದು ದಿನವಾಗುವಷ್ಟರಲ್ಲಿ ಹಳೆಯ ಕಾರುಗಳು ದೊಪ್ಪನೆ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಹಾಗಿರುವಾಗ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ವರ್ಷಗಳಿಂದಲೂ ತನ್ನ ಬೇಡಿಕೆಯನ್ನು ಕಾಯ್ದುಕೊಂಡಿರುವ 9 ಹಳೆಯ ವಾಹನಗಳ ಬಗ್ಗೆ ನಾವೀಗ ಚರ್ಚಿಸಲಿದ್ದೇವೆ.
Also Read: ಹಳೆಯ ಕಾರಿನಿಂದ ಮಿಸ್ ಮಾಡಿಕೊಳ್ಳುವ 10 ಸಂಗತಿಗಳು
ಈ ಪಟ್ಟಿನಲ್ಲಿ ನಿಮ್ಮ ನೆಚ್ಚಿನ ವಾಹನ ಎಂಬುದನ್ನು ನಮ್ಮ ಕಾಮೆಂಟ್ ಬಾಕ್ಸ್ ಮುಖಾಂತರ ಉಲ್ಲೇಖಿಸಲು ಮರೆಯದಿರಿ. ಈ ಎಲ್ಲದರ ಬಗೆಗಿನ ಸಮಗ್ರ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ...

01. ವಿಲ್ಲಿಸ್ ಜೀಪ್
'ಓಲ್ಡ್ ಈಸ್ ಗೋಲ್ಡ್' ಎಂಬ ಹೇಳಿಕೆಗೆ ವಿಲ್ಲಿಸ್ ಜೀಪ್ ಉತ್ತಮ ಉದಾಹರಣೆಯಾಗಿದೆ. ಆರಾಮ ಹಾಗೂ ಅನುಕೂಲದ ವಿಚಾರದಲ್ಲಿ ಆಧುನಿಕ ವಾಹನಗಳನ್ನು ಮೀರಿಸುತ್ತಿರುವ ವಿಲ್ಲಿಸ್ ಆಫ್ ರೋಡ್ ಸಾಮರ್ಥ್ಯವನ್ನು ಪಡೆದಿದೆ. ಭಾರತೀಯ ಹಳೆಯ ವಾಹನ ಮಾರುಕಟ್ಟೆಯಲ್ಲಿ ಈಗಲೂ ವಿಲ್ಲಿಸ್ ಜೀಪ್ ಮೂರು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತಿದೆ.

02. ಕಾಂಟೆಸ್ಸಾ
1980ರ ದಶಕದಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಹೊಸ ಆಯಾಮವನ್ನು ತುಂಬಿರುವ ಕಾಂಟೆಸ್ಸಾ ಅಂದಿನ ಐಷಾರಾಮಿ ಕಾರುಗಳ ಚಿತ್ರಣವನ್ನೇ ಬದಲಾಯಿಸಿತ್ತು. ಕಾರಿನೊಳಗೆ ಗರಿಷ್ಠ ಸ್ಥಳಾವಕಾಶ ಹಾಗೂ ಆರಾಮದಾಯಕ ಚಾಲನೆಯು ಈಗಲೂ ನಮ್ಮ ಹಿರಿಯರು ಕಾಂಟೆಸ್ಸಾ ಇಷ್ಟಪಡಲು ಕಾರಣವಾಗಿದೆ. ಇನ್ನು ಸ್ವಲ್ಪ ಬದಲಾವಣೆ ತಂದರೆ ಇದು ಅಮೆರಿಕಾ ಮಸಲ್ ಕಾರಿಗೇನು ಕಮ್ಮಿಯೇನಲ್ಲ ಎಂಬುದನ್ನು ನಿರೂಪಿಸಿದೆ.

03. ಫಿಯೆಟ್ ಪ್ರೀಮಿಯಂ ಪದ್ಮಿನಿ
ಹಿಂದೂಸ್ತಾನ್ ಅಂಬಾಸಿಡರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಫಿಯೆಟ್ ಪ್ರೀಮಿಯಂ ಪದ್ಮಿನಿ ಎಲ್ಲ ಹಂತದಲ್ಲೂ ತನ್ನ ಪ್ರತಿಸ್ಪರ್ಧಿಗೆ ಸವಾಲಾಗಿ ನಿಂತಿತ್ತು. ಇದೇ ಪದ್ಮಿನಿ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಈಗಲೂ ಹಳೆಯ ಕಾರು ಪ್ರೇಮಿಗಳು ಪ್ರೀಮಿಯಂ ಪದ್ಮಿನಿ ಕಾರಿಗೆ ಕೆಲವೊಂದು ಬದಲಾವಣೆಗಳನ್ನು ತಂದು ಬಳಕೆ ಮಾಡುತ್ತಿದ್ದಾರೆ.

04. ಜಿಪ್ಸಿ
ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸಿರುವ ಮಾರುತಿ ಜಿಪ್ಸಿ ಈಗಲೂ ಆಫ್ ರೋಡ್ ಚಾಲಕರ ಪಾಲಿಗೆ ನೆಚ್ಚಿನ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಜಿಪ್ಸಿ ಸಾಮಾನ್ಯ ಒಳ್ಳೆಯ ಸೆಕೆಂಡ್ ಹ್ಯಾಂಡ್ ಕಾರಿಗೆ 2.5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತದೆ.

05. ಸ್ಕೋಡಾ ಒಕ್ಟಾವಿಯಾ ಆರ್‌ಎಸ್
ಪ್ರಸ್ತುತ ಪಟ್ಟಿಯಲ್ಲಿ ಇತರೆ ಕಾರುಗಳಿಗೆ ಹೋಲಿಕೆ ಮಾಡಿದಾಗ ಸ್ಕೋಡಾ ಒಕ್ಟಾವಿಯಾ ಸ್ವಲ್ಪ ಆಧುನಿಕ ಕಾರೆನಿಸಿಕೊಂಡಿದೆ. ಆದರೂ ಒಂದು ಲಕ್ಷಕ್ಕೂ ಹೆಚ್ಚು ಓಡಿರುವ ಈ ಸ್ಕೋಡಾ ನಿರ್ವಹಣಾ ಕಾರು 2.5 ಲಕ್ಷ ರು.ಗಳಿಗೂ ಹೆಚ್ಚು ಬೆಲೆ ಬಾಳುತ್ತಿದೆ.

06. ಯಮಹಾ ಆರ್ ಡಿ 350
ಕಾರುಗಳ ತರಹನೇ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಹಳೆಯ ಬೈಕ್ ಗಳು ಅತಿ ಹೆಚ್ಚು ಬೇಡಿಕೆಯನ್ನು ಕಾಯ್ದುಕೊಂಡಿದೆ. ಇದಕ್ಕೊಂದು ಉತ್ತಮ ಉದಾಹರಣೆ ಯಮಹಾ ಆರ್ ಡಿ 350 ಆಗಿದೆ. ಈ ಟು ಸ್ಟ್ರೋಕ್ ಟ್ವಿನ್ ಸಿಲಿಂಡರ್ ಎಂಜಿನ್ ಈಗಲೂ ಲಕ್ಷಗಿಂತಲೂ ಹೆಚ್ಚು ಮೊತ್ತವನ್ನು ಸಂಗ್ರಹಿಸುವಷ್ಟು ತಾಕತ್ತು ಹೊಂದಿದೆ.

07. ಯಮಹಾ ಆರ್ ಎಕ್ಸ್ ಸಿರೀಸ್
ಒಂದು ಕಾಲಘಟ್ಟದಲ್ಲಿ ರಾಜಾರೋಷವಾಗಿ ಸದ್ದು ಮಾಡುತ್ತಿದ್ದ ಯಮಹಾ ಆರ್ ಎಕ್ಸ್ ಶ್ರೇಣಿಯ ಬೈಕ್ ಗಳು ಸಮಕಾಲೀನ ಮಾರುಕಟ್ಟೆಯಲ್ಲೂ ತನ್ನ ಅಮೋಘ ಪರಂಪರೆಯನ್ನು ಕಾಯ್ದುಕೊಂಡಿದೆ. ಈಗಲೂ ಅನೇಕ ಕಾಲೇಜು ಯುವಕರ ಪಾಲಿಗೆ ಆರ್ ಎಕ್ಸ್ 100 ನೆಚ್ಚಿನ ಬೈಕಾಗಿದೆ.

08. ರಾಯಲ್ ಎನ್ ಫೀಲ್ಡ್ ಸ್ಟ್ಯಾಂಡರ್ಡ್ 350/500
ದೇಶದ ಐಕಾನಿಕ್ ರಾಯಲ್ ಎನ್ ಫೀಲ್ಡ್ ಬೈಕ್ ಬೇಡಿಕೆಯ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ವಿಪರ್ಯಾಸವೆಂದರೆ ಹೊಸ ಬೈಕ್ ಗಿಂತಲೂ ಎನ್ ಫೀಲ್ಡ್ ಹಳೆಯ ಬೈಕ್ ಗಳಿಗೆ ಬೇಡಿಕೆ ಹೆಚ್ಚಿದೆ. ಸಾಮಾನ್ಯ ಅತ್ಯುತ್ತಮ ಎನ್ ಫೀಲ್ಡ್ 350 ಬೈಕ್ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯವನ್ನು ಕಾಪಾಡಿಕೊಂಡಿದೆ.

9. ಯೆಜ್ಡಿ
1960ರ ದಶಕದಲ್ಲಿ ಮೈಸೂರು ತಳಹದಿಯ ಭಾರತೀಯ ದ್ವಿಚಕ್ರ ವಾಹನ ಸಂಸ್ಥೆ ಐಡಿಯಲ್ ಜಾವಾ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಪ್ರಾರಂಭದಲ್ಲಿ ಜಾವಾ ತದಾ ಬಳಿಕ ಯೆಜ್ಡಿ ಬ್ರಾಂಡ್ ಹೆಸರಲ್ಲಿ ಮಾರಾಟವನ್ನು ಆರಂಭಿಸಿತ್ತು. "ಶಾಶ್ವತ ಬೈಕ್ ಶಾಶ್ವತ ಮೌಲ್ಯ" ಪಡೆದಿರುವ ಯೆಜ್ಡಿ ಬೈಕ್ ಗಳಿಗೆ ಈಗಲೂ ಗರಿಷ್ಠ ಬೇಡಿಕೆ ಕಾಯ್ದುಕೊಂಡಿದೆ.

ತರ್ಕಕ್ಕೆ ನಿಲುಕದ್ದು: ಹಳೆಯ ಕಾರುಗಳ 10 ಆಘಾತಕಾರಿ ಸತ್ಯಗಳು
ಅಂತರ್ಜಾಲದಲ್ಲಿ ಹಳೆಯ ಕಾರು ಮಾರಾಟಕ್ಕೆ 11 ಸರಳ ಸೂತ್ರಗಳು


Click it and Unblock the Notifications








