266 ಕೋಟಿ ರು. ತೆರಿಗೆ ವಂಚನೆ ಆರೋಪ ಹ್ಯುಂಡೈಗೆ ಶೋಕಾಸ್

"ಹ್ಯುಂಡೈ ಮೋಟರ್ ನ ಭಾರತೀಯ ಅಂಗಸಂಸ್ಥೆ 2005ರಿಂದ 2010ರ ಅವಧಿಯಲ್ಲಿ ಸುಮಾರು 266 ಕೋಟಿ ರುಪಾಯಿ ತೆರಿಗೆ ವಂಚಿಸಿದೆ. ಈ ಕುರಿತು ಕಂಪನಿಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ. ಕಂಪನಿಯು ಶೀಘ್ರದಲ್ಲಿ ಪ್ರತ್ಯುತ್ತರ ನೀಡುವ ನಿರೀಕ್ಷೆಯಲ್ಲಿದ್ದೇವೆ" ಎಂದು ಡಿಆರ್ಐ ಹೆಚ್ಚುವರಿ ಪ್ರಧಾನ ನಿರ್ದೇಶಕ ಎಸ್ ರಾಜನ್ ಹೇಳಿದ್ದಾರೆ.
ಈ ಕುರಿತು ಕಂಪನಿಯು ನೀಡಿದ ಪ್ರಕಟಣೆ ಇಂತಿದೆ. "ಹ್ಯುಂಡೈ ಮೋಟರ್ ಇಂಡಿಯಾ ಲಿಮೆಟೆಡ್ ತೆರಿಗೆ ವಂಚನೆ ಆರೋಪವನ್ನು ನಿರಾಕರಿಸುತ್ತದೆ. ಹ್ಯುಂಡೈನ ಎಲ್ಲಾ ವ್ಯವಹಾರ ಮೌಲ್ಯಯುತವಾಗಿದೆ. ಇಲ್ಲಿ ವಂಚನೆ ನಡೆದಿರುವ ಸಾಧ್ಯತೆಯೇ ಇಲ್ಲ. ಕಂಪನಿಯು ಕಾನೂನು ಹಾದಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಲಿದೆ" ಎಂದು ಪ್ರಕಟಿಸಿದೆ.


Click it and Unblock the Notifications








