ಮತ್ತೆ ಪ್ಲಾಸ್ಟಿಕ್ ಸರ್ಜರಿ ಮಾಡಿದ ಟಾಟಾ ಇಂಡಿಕಾ

ಇಂಡಿಕಾ ವಿನ್ಯಾಸವನ್ನು ಮತ್ತೆ ಟಾಟಾ ಬದಲಾಯಿಸಿದೆ. ನೂತನವಾಗಿ ದೊಡ್ಡದಾದ ಹೆಡ್ ಲ್ಯಾಂಪ್ ಮತ್ತು ಗ್ರಿಲ್ ಅಳವಡಿಸಲಾಗಿದೆ. ಈ ವಿನ್ಯಾಸವನ್ನು ಕಂಪನಿಯ ಇಂಡಿಕಾ ಮಾಂಝಾ ಸೆಡಾನ್ ಕಾರಿನಲ್ಲಿ ನೋಡಬಹುದು. ಇದರೊಂದಿಗೆ ಇಂಡಿಕೇಟರ್ ಸಂಖ್ಯೆಯೂ ಹೆಚ್ಚಾಗಿದೆ. ಹಳೆಯ ಇಂಡಿಕಾ ಕಾರುಗಳಿಗೆ ಹೋಲಿಸಿದರೆ ನೂತನ ಕಾರು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ತಾಂತ್ರಿಕವಾಗಿ ಮಹತ್ವದ ಯಾವುದೇ ಬದಲಾವಣೆಯಾಗಿಲ್ಲ. ಗೇರ್ ಬಾಕ್ಸ್, ಎಂಜಿನ್ ಆಯ್ಕೆಗಳು ಹಿಂದಿನದೇ ಇದೆ. ಹಿಂದಿನ ಮತ್ತು ಮುಂದಿನ ಬಂಪರ್ ಗಳನ್ನು ಮರುವಿನ್ಯಾಸ ಮಾಡಿರುವುದರಿಂದ ನೂತನ ಇಂಡಿಕಾ ಕೊಂಚ ಬೃಹತ್ ಆಗಿ ಕಾಣುತ್ತಿದೆ. ಹೊಸ ವಿನ್ಯಾಸದ ಇಂಡಿಕಾದ ದರವೂ ಕೊಂಚ ಬದಲಾಗಿದೆ. ಈಗ ರಸ್ತೆಯಲ್ಲಿರುವ ಇಂಡಿಕಾ ಕಾರುಗಳ ದರ 3.38 ಲಕ್ಷ ರು. ಆಸುಪಾಸಿನಲ್ಲಿದೆ.


Click it and Unblock the Notifications