ಫ್ರಂಕ್ ಫರ್ಟ್ ಗೆ ಫೆರಾರಿ 458 ಇಟಾಲಿಯಾ ಸ್ಪೈಡರ್

ಫೆರಾರಿಯ 5 ಕಾರುಗಳು ರಸ್ತೆಗಿಳಿಯಲು ಸರದಿಯಲ್ಲಿವೆ. ಎಫ್430 ಎಂಬುದು ಫೆರಾರಿ 458 ಇಟಲಿಯ ಕಾರಿನ ಪರಿವರ್ತಿಸಿದ ಆವೃತ್ತಿಯಾಗಿದೆ. ಮತ್ತೊಂದು ಆವೃತ್ತಿ 599 ಜಿಟಿಬಿ ಫಿಯರೊನೊ ಕೂಡ ರಸ್ತೆಗಿಳಿಯಲಿದೆ. 459 ಇಟಲಿಯಾ ಕಾರು 2014ರ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ.
ಇದರಲ್ಲಿ 458 ಸ್ಪೈಡರ್ ಕಾರು ಫೆರಾರಿ 430 ಕಾರಿನ ಪರಿಷ್ಕೃತ ಆವೃತ್ತಿಯಾಗಿದೆ. ನೂತನ ಕನ್ವರ್ಟಿಬಲ್ ಕಾರಿನ ಮಾರಾಟವನ್ನು ಮುಂದಿನ ತಿಂಗಳಲ್ಲೇ ಆರಂಭಿಸುವುದಾಗಿ ಫೆರಾರಿ ಹೇಳಿದೆ. ಆದರೆ ಈ ಕಾರನ್ನು ಭಾರತಕ್ಕೆ ಯಾವಾಗ ಪರಿಚಯಿಸಲಾಗುತ್ತದೆ ಎಂಬುದುನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ. ಆರಂಭದಲ್ಲಿ ಅಮೆರಿಕದಲ್ಲಿ, ನಂತರ ಯುರೋಪ್ ಮಾರುಕಟ್ಟೆಗೆ ನೂತನ ಕಾರನ್ನು ಪರಿಚಯಿಸುವುದಾಗಿ ಫೆರಾರಿ ಪ್ರಕಟಿಸಿದೆ.


Click it and Unblock the Notifications








