ಹೊಸ ಹೋಂಡಾ ಕಾರು, ದರ ಕಡಿಮೆ, ಮೈಲೇಜ್ ಹೆಚ್ಚು

ನವದೆಹಲಿ, ಆಗಸ್ಟ್ 19: ಹೋಂಡಾ ಕಂಪನಿಯು ತನ್ನ ಹ್ಯಾಚ್ ಬ್ಯಾಕ್ ಕಾರು ಜಾಝ್ ನ ನೂತನ ಆವೃತ್ತಿಯೊಂದನ್ನು ಪರಿಚಯಿಸಿದೆ. ನೂತನ ಜಾಝ್ ದರ ದೆಹಲಿ ಎಕ್ಸ್ ಶೋರೂಂನಲ್ಲಿ 5.50 ಲಕ್ಷ ರು.ನಿಂದ 6.06 ಲಕ್ಷ ರು.ವರೆಗಿದೆ.

"ನೂತನ ಜಾಝ್ ಆಕರ್ಷಕ ದರ ಹೆಚ್ಚು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆಯಿದೆ" ಎಂದು ಹೋಂಡಾ ಸಿಯೆಲ್ ಕಾರ್ ಇಂಡಿಯಾ ಲಿಮಿಟೆಡ್ ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಸೆಕಿ ಐನಬಾ ಹೇಳಿದ್ದಾರೆ. ನೂತನ ಜಾಝ್ ನೂತನ ತಂತ್ರಜ್ಞಾನದಿಂದ ಬಂದಿದ್ದು ಬಿಡಿಭಾಗಗಳನ್ನು ಕೂಡ ಸ್ಥಳೀಯವಾಗಿ ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

"ಕಳೆದ ಕೆಲವು ವರ್ಷಗಳಿಂದ ಕಂಪನಿಯು ಸ್ಥಳೀಯ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ. ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹೆಚ್ಚಿಸುವ ಮೂಲಕ ಹಲವು ನೂತನ ಮಾದರಿಗಳನ್ನು ಪರಿಚಯಿಸುತ್ತಿದ್ದೇವೆ" ಎಂದು ಸೆಕಿ ಐನಬಾ ಹೇಳಿದ್ದಾರೆ.

ನೂತನ ಹೋಂಡಾ ಜಾಝ್ 4 ಸಿಲಿಂಟರ್ 1,2 ಲೀಟರಿನ ಐವಿಟೆಕ್ ಎಂಜಿನ್ ಹೊಂದಿದೆ. ಇದು ಪ್ರತಿಲೀಟರ್ ಇಂಧನಕ್ಕೆ 16.7 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಜಾಝ್ ಭಾರತದ ರಸ್ತೆಗೆ 2009ರಲ್ಲಿ ಬಂದಿತ್ತು.

ನೂತನ ಜಾಝ್ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಜಾಝ್ ಎಸ್, ಜಾಝ್ ಸೆಲೆಕ್ಟ್ ಮತ್ತು ಜಾಝ್ ಎಕ್ಸ್ ಎಂಬ ಮೂರು ಆವೃತ್ತಿಗಳಲ್ಲಿ ದೊರಕುತ್ತಿದ್ದು ಎಲ್ಲವೂ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿವೆ. ಜಾಝ್ ಚಿತ್ರಗಳನ್ನು ನೋಡಿರಿ

More from DriveSpark

Article Published On: Friday, August 19, 2011, 10:18 [IST]
English summary
Honda Siel Cars India (HSCI) has launched the new upgraded yet cheaper Jazz hatchback on Thursday, 18 Aug. The new Jazz is priced at Rs.5.50 lakhs and Rs.6.06 lakhs which is still lower than the car it replaces.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+