ಫಿಯೆಟ್ ನಿಂದ ಮಾರುತಿಗೆ ಡೀಸೆಲ್ ಎಂಜಿನ್

ಮಾರುತಿ ಸುಜುಕಿ ಈಗ ತನಗೆ ಬೇಕಾದ ಪೆಟ್ರೊಲ್ ಎಂಜಿನ್ ಮತ್ತು ಕೆಲವು ಡಿಸೇಲ್ ಎಂಜಿನ್ ಉತ್ಪಾದಿಸುತ್ತಿದೆ. ಆದರೆ ಭಾರತದಲ್ಲಿ ಡೀಸೆಲ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಕಂಪನಿಯು ಫಿಯೆಟ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.
ಕಳೆದ ವರ್ಷ ಮಾರುತಿ ಸುಜುಕಿಯ ಡೀಸೆಲ್ ಕಾರು ಮಾರಾಟ ಶೇಕಡ 20ರಷ್ಟು ಏರಿಕೆ ಕಂಡಿದೆ. ಕಳೆದ ಎರಡು ವರ್ಷಗಳಿಂದ ಡೀಸೆಲ್ ಕಾರುಗಳಿಗೆ ಬೇಡಿಕೆ ಗಮನಾರ್ಹವಾಗಿ ಕಾಣುತ್ತಿದೆ. ರಿಟ್ಜ್, ಡಿಜೈರ್ ಮತ್ತು ಎಸ್ಎಕ್ಸ್4 ಡೀಸೆಲ್ ಆವೃತ್ತಿಗಳ ಬುಕ್ಕಿಂಗ್ಸ್ ಕೂಡ ಶೇಕಡ 85ರಷ್ಟು ಹೆಚ್ಚಾಗಿದೆ. ಹೀಗಾಗಿ ಕಂಪನಿಯು ಡೀಸೆಲ್ ಎಂಜಿನ್ ಪೂರೈಕೆಗಾಗಿ ಫಿಯೆಟ್ ನೊಂದಿಗೆ ಡೀಲ್ ಕುದುರಿಸುತ್ತಿದೆ ಎಂದು ಮೂಲಗಳು ಹೇಳಿವೆ.


Click it and Unblock the Notifications








