ಅರೇ ಇದು ಬೈಕಲ್ಲ! ಸಿಂಗಲ್ ಸೀಟಿನ ಕಾರು!!

ಬೈಕಿನಂತೆ ಇರುವ ಈ ಕಾರಿಗೆ ನಾಲ್ಕು ಪುಟ್ಟ ಚಕ್ರಗಳಿವೆ. ಈ ಕಾನ್ಸೆಪ್ಟ್ ಕಾರು ಫೋಕ್ಸ್ ವ್ಯಾಗನ್ ನ ಕನಸಿನ ಕೂಸು. ಈ ಕಾರನ್ನು ಈಗಾಗಲೇ ಪರೀಕ್ಷಾತ್ಮಕವಾಗಿ ಜರ್ಮನ್ ರಸ್ತೆಯಲ್ಲಿ ಡ್ರೈವ್ ಮಾಡಿ ನೋಡಿಯಾಗಿದೆ. ಈ ಪುಟ್ಟ ಕಾರು ಕೆಲವೇ ವಾರಗಳಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ.
ಇದು ಹೈಬ್ರಿಡ್ ಕಾರು ಎಕ್ಸ್ಎಲ್1 ಸೂಪರ್ ಕಾರಿಗಿಂತ ಹೆಚ್ಚು ದಕ್ಷತೆ ಹೊಂದಿರಲಿದೆಯಂತೆ. ಎಕ್ಸ್ಎಲ್1 ಪ್ರತಿಲೀಟರ್ ಇಂಧನ(ಮತ್ತು ಕರೆಂಟ್)ಗೆ 100 ಕಿ.ಮೀ. ಮೈಲೇಜ್ ನೀಡುತ್ತದೆ. ಆದರೆ ನೂತನ ಕಾನ್ಸೆಪ್ಟ್ ಕಾರಿನ ಗರಿಷ್ಠ ವೇಗ, ಶಕ್ತಿ, ಮೈಲೇಜ್ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.
ಫೋಕ್ಸ್ ವ್ಯಾಗನ್ ಕಂಪನಿಯು ಹೈಬ್ರಿಡ್ ಕಾರು ಸೆಗ್ಮೆಂಟಿನಲ್ಲಿ ಅವಕಾಶಗಳ ಹುಡುಕಾಟದಲ್ಲಿದೆ. ಇದರೊಂದಿಗೆ ಎಲೆಕ್ಟ್ರಿಕ್ ಕಾರುಗಳನ್ನೂ ಅಭಿವೃದ್ಧಿಪಡಿಸುತ್ತಿದೆ. ಗಮನಾರ್ಹ ವಿಷಯವೆಂದರೆ ಫೋಕ್ಸ್ ವ್ಯಾಗನ್ ಇಲ್ಲಿವರೆಗೆ ಪೂರ್ಣಪ್ರಮಾಣದ ಎಲೆಕ್ಟ್ರಿಕ್ ಕಾರನ್ನು ಹೊರತಂದಿಲ್ಲ.


Click it and Unblock the Notifications








