ಫೋಕ್ಸ್ ವ್ಯಾಗನ್ ಸಣ್ಣಕಾರು "ಅಪ್" ಅನಾವರಣ

ಎಲ್ಲಾದರೂ ಈ ಸಣ್ಣಕಾರು ಭಾರತಕ್ಕೆ ಆಗಮಿಸಿದರೆ ಇದು ಅತ್ಯಂತ ಅಗ್ಗದ ಕಾರಾಗಲಿದೆ. ಕಂಪನಿಯು ಆರಂಭದಲ್ಲಿ ಈ ಕಾರನ್ನು ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗೆ ಪರಿಚಯಿಸಲು ಯೋಜಿಸಿದೆ.
ನೂತನ ಫೋಕ್ಸ್ ವ್ಯಾಗನ್ ಅಪ್ ಕಾರು ಪೊಲೊದಂತೆ ಇದೆ. ನಗರ ಪ್ರದೇಶದಲ್ಲಿ ವಾಸಿಸುವರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಕಾರನ್ನು ಹೊರತಂದಿದೆ. ಈ ಕಾರು ಕೇವಲ 11.6 ಫೀಟ್ ಉದ್ದವಿದೆ. 1.64 ಮೀಟರ್ ಅಗಲವಿದೆ. ಇದು ಸಣ್ಣಕಾರಾದರೂ ಇದರಲ್ಲಿ ನಾಲ್ಕುಜನರು ಕುಳಿತುಕೊಳ್ಳಬಹುದು ಎಂದು ಕಂಪನಿ ಹೇಳಿದೆ.
ಫೋಕ್ಸ್ ವ್ಯಾಗನ್ ಅಪ್ ಕಾರು ಒಂದು ಲೀಟರಿನ 3 ಸಿಲಿಂಡರ್ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು ಸುಮಾರು 59 ಅಶ್ವಶಕ್ತಿ ನೀಡುತ್ತದೆ. ಇದು ಪ್ರತಿಲೀಟರ್ ಗೆ 23 ಕಿಲೋ ಮೀಟರ್ ಮೈಲೇಜ್ ನೀಡುತ್ತದಂತೆ.
ಈ ಕಾರು ಭಾರತದ ರಸ್ತೆಗಿಳಿದರೆ, ಮಾರುತಿ ಸುಜುಕಿ ಆಲ್ಟೊ, ವ್ಯಾಗನಾರ್, ಹ್ಯುಂಡೈ ಐ10 ಮತ್ತು ಷೆವರ್ಲೆ ಬೀಟ್ ಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಯುರೋಪ್ ಮಾರುಕಟ್ಟೆಯಲ್ಲಿ ಫಿಯೆಟ್ 500 ಮತ್ತು ಟೊಯೊಟಾ ಆಯ್ಗೊ ಕಾರುಗಳಿಗೆ ಇದು ಸ್ಪರ್ಧೆ ಒಡ್ಡಲಿದೆ. ನೂತನ ಅಪ್ ಕಾರಿನ ದರವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ.


Click it and Unblock the Notifications








