ಮಾರುತಿ ಸ್ವಿಫ್ಟ್ ವೇಟಿಂಗ್ ಅವಧಿ ಎಷ್ಟು?

Swift Bookings
ಮಾರುತಿ ಸುಜುಕಿಯ ನೂತನ ಸ್ವಿಫ್ಟ್ ಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹೀಗಾಗಿ ನೂತನ ಸ್ವಿಪ್ಟ್ ವೇಟಿಂಗ್ ಪಿರೇಡ್ ಎಷ್ಟು ಅನ್ನೋ ಸಹಜ ಕುತೂಹಲ ಎಲ್ಲರಿಗೂ ಇರುತ್ತದೆ. ಇತ್ತೀಚಿನ ವರದಿಯೊಂದರ ಪ್ರಕಾರ ನೂತನ ಸ್ವಿಫ್ಟ್ ಡೀಸೆಲ್ ಆವೃತ್ತಿಗೆ ಕೆಲವು ಶೋರೂಂಗಳಲ್ಲಿ ನಾಲ್ಕು ತಿಂಗಳು ವೇಟಿಂಗ್ ಪಿರೇಡ್ ಇದೆಯಂತೆ. ಪೆಟ್ರೊಲ್ ಆವೃತ್ತಿಗೆ ಎರಡರಿಂದ ಮೂರು ತಿಂಗಳು ಕಾಯಬೇಕಂತೆ!

ಆದರೆ ಡೀಸೆಲ್ ಸ್ವಿಫ್ಟ್ ವೇಟಿಂಗ್ ಪಿರೇಡ್ ಜಾಸ್ತಿ ಇರುವ ನಿರೀಕ್ಷೆಯಿತ್ತು. ಯಾಕೆಂದರೆ ಸ್ವಿಫ್ಟ್ ಡಿಜೈರ್ ಡೀಸೆಲ್ ವೇಟಿಂಗ್ ಪಿರೇಡ್ 6 ತಿಂಗಳು ಇದೆ. ಮಾರುತಿ ಸುಜುಕಿ ಇದೀಗ ಡೀಸೆಲ್ ಸ್ವಿಫ್ಟ್ ಉತ್ಪಾದನೆಯನ್ನು ತೀವ್ರವಾಗಿ ಹೆಚ್ಚಿಸುವ ಒತ್ತಡಕ್ಕೆ ಸಿಲುಕಿದೆ. ಕಂಪನಿ ಹೇಳೋ ಪ್ರಕಾರ ಸ್ವಿಫ್ಟ್ ಬುಕ್ಕಿಂಗ್ ನಲ್ಲಿ ಶೇಕಡ 80ರಷ್ಟು ಗ್ರಾಹಕರು ಡೀಸೆಲ್ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ.

ಸ್ವಿಫ್ಟ್ ರಸ್ತೆಗಿಳಿಯೋ ಮುನ್ನವೇ ಬುಕ್ಕಿಂಗ್ ಮಾಡಿದ ಗ್ರಾಹಕರು ಕೆಲವು ತಿಂಗಳು ಕಾದರೆ ಸಾಕು. ಆದರೆ ಇನ್ನಷ್ಟೇ ಬುಕ್ಕಿಂಗ್ ಮಾಡಲಿರುವ ಗ್ರಾಹಕರು ಕಡಿಮೆಯೆಂದರೆ ನಾಲ್ಕು ತಿಂಗಳು ಕಾಯುವ ಅಗತ್ಯವಿದೆ ಎಂದು ಡೀಲರೊಬ್ಬರು ಅಭಿಪ್ರಾಯಪಡುತ್ತಾರೆ.

ನೂತನ ಸ್ವಿಫ್ಟ್ ನ ವೇಟಿಂಗ್ ಪಿರೇಡನ್ನು ಕಡಿಮೆ ಮಾಡಲು ಮಾರುತಿ ಸುಜುಕಿ ಪ್ರಯತ್ನಿಸುತ್ತಿದೆ. ಈಗಾಗಲೇ ಹಂಗೇರಿಗೆ ಡೀಸೆಲ್ ಎಂಜಿನ್ ರಫ್ತು ಮಾಡೋದನ್ನು ಕಡಿಮೆ ಮಾಡಿದೆ. ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಪೈಂಟಿಂಗ್ ಬಣ್ಣ ಕೂಡ ವೇಟಿಂಗ್ ಪಿರೇಡ್ ಮೇಲೆ ಪರಿಣಾಮ ಬೀರಲಿದೆಯಂತೆ.

More from DriveSpark

Article Published On: Wednesday, August 24, 2011, 14:40 [IST]
English summary
Four Month Waiting Period For Diesel Swift. Even the petrol variant of the Swift is now commanding a waiting period of two to three months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+