ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಮಾರುತಿ ಸುಜುಕಿ ಸ್ವಿಫ್ಟ್
ದೇಶಿಯ ಮರುಕಟ್ಟೆಯಲ್ಲಿ ಪ್ರತೀ ತಿಂಗಳು ಟಾಪ್ 10 ಸೆಲ್ಲಿಂಗ್ ಕಾರುಗಳ ಪಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಕಾರುಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಅದರಲ್ಲಿಯು ಅಧಿಕವಾಗಿ ಜನಪ್ರಿಯತೆಯನ್ನು ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯ ಆಲ್ಟೋ, ಸ್ವಿಫ್ಟ್ ಮಾತು ಡಿಜೈರ್ ಕಾರುಗಳು ಇದ್ದೇ ಇರುತ್ತೆ.

ಈ ನಿಟ್ಟಿನಲ್ಲಿ ಹ್ಯಾಚ್‍ಬ್ಯಾಕ್ ಕಾರುಗಳ ಸರಣಿಯಲ್ಲಿ ಮುನ್ನುಗ್ಗುತ್ತಿರುವ ಸ್ವಿಫ್ಟ್ ಕಾರು ಮತ್ತೊಂದು ಹೆಗ್ಗಳಿಕೆಗೆ ಕಾರಣವಾಗಿದ್ದು, ಆಟೋ ಎನ್‍ಡಿಟಿವಿ ಮಾಹಿತಿಗಳ ಪ್ರಕಾರ ಬಿಡುಗಡೆಗೊಂಡಾಗಿನಿಂದಲೂ ಇಲ್ಲಿಯವರೆಗು ಸುಮಾರು 2 ಮಿಲಿಯನ್ ಅಂದರೆ ಬರೊಬ್ಬರಿ 20 ಲಕ್ಷ ಸ್ವಿಫ್ಟ್ ಕಾರುಗಳು ಮಾರಾಟಗೊಂಡು ಮತ್ತೊಂದು ಮೈಲಿಗಲ್ಲು ತಲುಪಿದೆ.

ಹೌದು, ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮೊದಲಿಗೆ 2005ರಲ್ಲಿ ಬಿಡುಗಡೆಗೊಂಡಿತ್ತು, ಬಿಡುಗಡೆಯಾದ ಸಮಯದಿಂದಲೂ 13 ವರ್ಷದಲ್ಲಿ 20 ಲಕ್ಷ ಕಾರುಗಳು ಮಾರಾಟಗೊಂಡು ಹೊಸ ಮೈಲಿಗಲ್ಲು ತಲುಪಿದೆ ಎನ್ನಲಾಗಿದೆ.

ಮೇಲೆ ಹೇಳಿರುವ ಹಾಗೆ 2005ರಲ್ಲಿ ಬಿಡುಗಡೆಗೊಂಡ ಮೊದಲ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರು 2010ರ ವೇಳೆಗೆ 50000 ಯೂನಿಟ್ ಮಾರಾಟಗೊಂಡು ಮೊದಲನೆಯ ಮೈಲಿಗಲ್ಲನ್ನು ತಲುಪಿತ್ತು. ನಂತರ 2016ರ ವೇಳೆಗೆ 1.5 ಮಿಲಿಯನ್ ಯೂನಿಟ್ ಮಾರಾಟಗೊಂಡು ಎರಡನೆಯ ಮೈಲಿಗಲ್ಲನ್ನು ತಲುಪಿತ್ತು. ಆದರೆ ಇದೀಗ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಬಿಡುಗಡೆಯ ನಂತರ ಒಟ್ಟಾರೆಯಾಗಿ 2.2 ಮಿಲಿಯನ್ ಯೂನಿಟ್ ಮಾರಾಟಗೊಂಡಿದೆ.

ಐದನೇ ತಲೆಮಾರಿನ ಹೆರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಎಂಜಿನ್ ಸಾಮರ್ಥ್ಯ
ಹೊಸ ಸ್ವಿಫ್ಟ್ ವಿನೂತನ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 83 ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಆವೃತ್ತಿಯು 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಜೊತಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಡಿಜೈರ್ ಮತ್ತು ಬಲೆನೊ ಕಾರುಗಳಿಂತಲೂ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ

ಕಾರಿನ ಒಳ ಮತ್ತು ಹೊರ ವಿನ್ಯಾಸ ಸ್ಪೋರ್ಟಿ ಇಂಟಿರಿಯರ್ ಲುಕ್ ಪಡೆದಿರುವ ಹೊಸ ಸ್ವಿಫ್ಟ್ ಕಾರುಗಳು ಅತ್ಯಾಕರ್ಷಕ ಹೆಕ್ಷಾಗೊನಲ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನ್ಯೂ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಎಲ್‌ಇಡಿ ಸಿಗ್ನಿಚರ್ ಟೈಲ್ ಲೈಟ್ ಕೂಡಾ ನೀಡಲಾಗಿದೆ.

ಇನ್ನು ಸ್ಮಾರ್ಟ್ ಕನೆಕ್ಟಿವಿಟಿಗೂ ಹೊಸ ಕಾರುಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಇಂಚಿನ ಇನ್ಪೋಟೈನ್‌ಮೆಂಟ್, ಆಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, ಮಿರರ್ ಲಿಂಕ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸಿಸ್ಟಂ ಒದಗಿಸಲಾಗಿದೆ.

ಸುರಕ್ಷಾ ಸಾಧನಗಳು ಎಂಜಿನ್ ಸ್ಟಾರ್ಟ್ ಆ್ಯಂಡ್ ಸ್ಟಾಪ್ ಬಟನ್ ಒದಗಿಸಲಾಗಿದ್ದು, ಆಟೋ ಹೆಡ್‌ಲ್ಯಾಂಪ್, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಆಪರೇಟಿಂಗ್ ರಿಯರ್ ವ್ಯೂವ್ ಮಿರರ್, ಎಬಿಎಸ್ ಸೇರಿದಂತೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವಿದೆ.

2018ರ ಸ್ವಿಫ್ಟ್ ಕಾರಿನ ಬೆಲೆಗಳನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯನ್ನು ರೂ. 4.99 ಲಕ್ಷಕ್ಕೆ ಮತ್ತು ಟಾಪ್ ಕಾರು ಮಾದರಿಯನ್ನು ರೂ. 8.39 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರುಗಳನ್ನು ಅಭಿವೃದ್ಧಿ ಮಾಡಿದೆ.


Click it and Unblock the Notifications








